ಯಶ್-ಶಾರುಖ್ ತೆರೆ ಮೇಲೆ ಒಂದಾಗ್ತಾರಾ?

ಯಶ್-ಶಾರುಖ್ ತೆರೆ ಮೇಲೆ ಒಂದಾಗ್ತಾರಾ?

ಬೆಂಗಳೂರು: ರಾಕಿ ಬಾಯ್ ಯಶ್ ಮತ್ತು ಕಿಂಗ್ ಖಾನ್ ಶಾರುಖಾನ್ ಒಂದೇ ತೆರೆ ಮೇಲೆ ಮಿಂಚಲಿದ್ದಾರೆ ಎಂಬ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದ್ದು, ಇದರಿಂದ ಯಶ್ ಮತ್ತು ಶಾರುಖ್ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ಒಟ್ಟಿಗೆ ನೆಟನೆ ಮಾಡುವುದರ ಜೊತೆಗೆ, ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡ್ತಾರೆ ಎಂಬ ಇಂಟರೆಸ್ಟಿಂಗ್ ಸುದ್ದಿ ಒಂದು ಹೊರ ಬಿದ್ದಿದ್ದು, ಜೊತೆಯಲ್ಲೇ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಯಶ್ ಮತ್ತು ಶಾರುಖ್ ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದ್ದಾರೆ.

ಯೆಸ್..‌ಬಾಲಿವುಡ್ ಅಂಗಳದಿಂದ ಹೊರ ಬಿತ್ತು ಒಂದು ಬೊಂಬಾಟ್ ಸುದ್ದಿ. ತೆರೆ ಮೇಲೆ ಒಂದಾಗುತ್ತಾರಂತೆ ನಟ ಯಶ್ ಮತ್ತು ಕಿಂಗ್ ಖಾನ್ ಶಾರುಖಾನ್. ಕನ್ನಡ ಚಿತ್ರರಂಗದ ನಟ ಯಶ್ ಮತ್ತು ಬಾಲಿವುಡ್ ನಟ ಶಾರುಖಾನ್ ಇವರಿಬ್ಬರು ಒಟ್ಟಿಗೆ ನಟನೆ ಮತ್ತು ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಒಂದು ಹೊರ ಬಿದ್ದಿದ್ದು ಸದ್ಯದಲ್ಲೇ ಅವರಿಬ್ಬರು ಒಂದೇ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಯಶ್ ಶಾರುಖ್ ಇಬ್ಬರೂ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋ ತಾಖತ್ತಿರೋ ಹೀರೋಗಳು. ಶಾರುಖ್ ಖಾನ್ ನಟನೆಯ ಜವಾನ್, ಪಠಾಣ್ ಸಿನಿಮಾಗಳು ಸಾವಿರ ಕೋಟಿ ಕಲೆಕ್ಷನ್ ಮಾಡಿವೆ. ಅದೇ ರೀತಿ ಯಶ್ರ ಕೆಜಿಎಫ್ ಸಿನಿಮಾ ಸಾವಿರ ಕೋಟಿ ದಾಟಿ ಹಣ ಗಳಿಸಿದೆ. ಈ ಇಬ್ಬರು ಗಲ್ಲಾಪೆಟ್ಟಿಗೆ ದೋಚೋದ್ರಲ್ಲಿ ಸೂರರು. ಹಾಗೇನಾದ್ರು ಶಾರುಖ್ ಹಾಗು ಯಶ್ ಸಿನಿಮಾ ಮಾಡಿದ್ರೆ ಆ ಸಿನಿಮಾವನ್ನ ಇಬ್ಬರು ಜಂಟಿಯಾಗಿ ನಿರ್ಮಾಣ ಮಾಡುತ್ತಾರೆ ಅಂತ ಹೇಳಲಾಗ್ತಿದೆ. ಶಾರುಖ್ ಖಾನ್ರ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆ ಹಾಗು ಯಶ್ರ ಮಾನ್ಸ್ಟಾರ್ ಮೈಂಡ್ ಪ್ರೊಡಕ್ಷನ್ ಹೌಸ್ ಜೊತೆಯಾಗಿ ಸಿನಿಮಾ ಮಾಡೋ ಸಾಧ್ಯತೆ ಇದೆ.

 

Related