ನೇಣು ಶರಣಾದ ಮಾಜಿ ಕಾರ್ಪೊರೇಟರ್ ಪತ್ನಿ

ನೇಣು ಶರಣಾದ ಮಾಜಿ ಕಾರ್ಪೊರೇಟರ್ ಪತ್ನಿ

ಬೆಂಗಳೂರು : ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತ್ನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ಪುರಂನಲ್ಲಿ ನಡೆದಿದೆ.
ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಅವರ ಪತ್ನಿ 35 ವರ್ಷದ ವಿನೋದಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಕೆ.ಆರ್.ಪುರಂ ನ ಬಸವನಪುರದ ತಮ್ಮದೇ ನಿವಾಸದಲ್ಲಿ ವಿನೋದಾ ಸಾವಿಗೆ ಶರಣಾಗಿದ್ದಾರೆ.

ವಿನೋದಾ ಇತ್ತೀಚೆಗೆ ಅಪೆಂಡಿಕ್ಸ್ ಆಪರೇಷನ್‌ಗೆ ಒಳಗಾಗಿದ್ದರು ಎನ್ನಲಾಗಿದೆ. ವಿನೋದಾ ಹಾಗೂ ಜಯಪ್ರಕಾಶ್‌ಗೆ ಮೂರು ವರ್ಷದ ಮಗು ಕೂಡ ಇದೆ. ಆದರೆ ಇದೀಗ ಮನೆಯಲ್ಲಿಯೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ವಿನೋದಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೌಟುಂಬಿಕ  ಕಲಹವೇ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ನಡುವೆ ಪತ್ನಿ ಆತ್ಮಹತ್ಯೆ ಸುದ್ದಿ ತಿಳಿದ ಪತಿ ಜಯಪ್ರಕಾಶ್ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

Related