ಮಾವಿನ ಹಣ್ಣನ್ನು ತಿನ್ನೋ ಮುಂಚೆ ನೀರಲ್ಲಿ ಯಾಕೆ ನೆನೆಸಿಡಬೇಕು?

ಮಾವಿನ ಹಣ್ಣನ್ನು ತಿನ್ನೋ ಮುಂಚೆ ನೀರಲ್ಲಿ ಯಾಕೆ ನೆನೆಸಿಡಬೇಕು?

ಬೇಸಿಗೆ ಕಾಲ ಬಂತೆಂದರೆ ಸಾಕು ಹಲವಾರು ಹಣ್ಣುಗಳ ಸೀಸನ್ ಇದಾಗಿರುತ್ತದೆ. ಅದರಲ್ಲೂ ಕೂಡ ಹಣ್ಣುಗಳ ರಾಜ ಎಂದೇ ಪ್ರಸಿದ್ಧಿಯನ್ನು ಹೊಂದಿರುವ ಮಾವಿನಹಣ್ಣು. ಮಾವಿನ ಹಣ್ಣು ಯಾರಿಗಿಷ್ಟ ಇಲ್ಲ ಹೇಳಿ? ಈ ಹಣ್ಣನ್ನು ಎಲ್ಲರೂ ಇಷ್ಟಪಟ್ಟು ಪ್ರೀತಿಯಿಂದ ತಿನ್ನುತ್ತಾರೆ.

ಆದರೆ ಮಾವಿನ ಹಣ್ಣನ್ನು ತಿನ್ನುವುದಕ್ಕಿಂತ ಮುಂಚೆ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ತಿನ್ನೋದರಿಂದ ಇಷ್ಟೆಲ್ಲ ಲಾಭಗಳಿವೆ ಎಂದು ನಿಮಗೆ ಗೊತ್ತಾ?…..

ಹೌದು, ಮಾವಿನ ಹಣ್ಣಿನಲ್ಲಿ ಫೈಟಿಕ್ ಆಸಿಡ್ ಎನ್ನುವಂತಹ ಒಂದು ಆಂಟಿ ನ್ಯೂಟ್ರೈನ್ ಇರುತ್ತೆ ಅದನ್ನು ಹಾಗೆ ಸೇವಿಸುವುದರಿಂದ ನಮ್ಮ ದೇಹದಲ್ಲಿ ಉಷ್ಣಾಂಶ (ಹೀಟು) ಜಾಸ್ತಿಯಾಗುತ್ತದೆ. ಆದ್ದರಿಂದ ಮಾವಿನ ಹಣ್ಣನ್ನು ತಿನ್ನುವುದಕ್ಕಿಂತ ಮುಂಚೆ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹೀಟು ತಗಲುವುದಿಲ್ಲ.

ಹೀಗೆ ಮಾವಿನ ಹಣ್ಣನ್ನು ಸೇವಿಸುವುದಕ್ಕಿಂತ ಮುಂಚೆ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಈ ಫೈಟಿಕ್ ಆಸಿಡ್ ಅಂಶ ನಮ್ಮ ದೇಹಕ್ಕೆ ದುಷ್ಪರಿಣಾಮ ಬೀರುವುದಿಲ್ಲ.

ಇನ್ನು ಮಾವಿನ ಹಣ್ಣಿನ ತೊಟ್ಟಲ್ಲಿರುವ ಸೋನೆ ಅಥವಾ ನಶೆ ಇದರಿಂದ ಅಲರ್ಜಿ ಸ್ಕಿನ್ ಅಲರ್ಜಿ, ಬಾಯಿ ಹುಣ್ಣು ಅಥವಾ ಬಾಯಿ ಅಲರ್ಜಿ ಆಗುತ್ತದೆ.

ಹೀಗಾಗಿ ನೀರಿನಲ್ಲಿ ಅರ್ಧ ಗಂಟೆಮಾವಿನ ಹಣ್ಣನ್ನು ನೆನೆಸಿಟ್ಟು ತಿಂದರೆ ಇದ್ಯಾವುದು ಆಗೋದಿಲ್ಲ. ಅಲ್ಲದೆ ಮಾವಿನ ಹಣ್ಣನ್ನು ಸಿಕ್ಕಾಪಟ್ಟೆ ದಿನದ ಹೀಂದೆ ಕಿತ್ತಿರುತ್ತಾರೆ.  ಇದು ಫ್ರೆಶ್ ಆಗಿರಲು ಹಲವಾರು ಕೆಮಿಕಲ್ ಔಷಧಿಗಳನ್ನು ಹೊಡೆದಿರುತ್ತಾರೆ. ಇದರಿಂದ ನಮ್ಮ ದೇಹದ ಮೇಲೆ ಅಡ್ಡ ಪರಿಮಳಾಮ ಬೀರುವುದುಂಟು. ಹಾಗಾಗಿ ಮಾವಿನ ಹಣ್ಣು ತಿನ್ನುವುದಕ್ಕಿಂತ ಮುಂಚೆ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿ ತೊಂದರೆ, ಅಲರ್ಜಿ ಆಗುವುದಿಲ್ಲ.

Related