ಬೆಂಗಳೂರು: ಧರ್ಮಸ್ಥಳ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸಮಾಜಿಕ ಮಾಧ್ಯಮಗಳು ಸೇರಿದಂತೆ ಯೂಟ್ಯೂಬರ್ಸ್ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು ಕೂಡ ಅವರ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಯಾಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರಾಗಿದ್ದರೆ ಸರ್ಕಾರ ಪ್ರಕರಣ ದಾಖಲಿಸಿ 24 ಗಂಟೆಗಳ ಒಳಗೆ ಅವರನ್ನು ಬಂಧಿಸುತ್ತಿತ್ತು. ಸರ್ಕಾರ ಸಮುದಾಯಗಳ ನಡುವೆ ಏಕೆ ತಾರತಮ್ಯ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಡಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ ಶಾಸಕ ವೀರೇಂದ್ರ!
ಧರ್ಮಸ್ಥಳ ಪ್ರಕರಣದಲ್ಲಿ, ಕೆಲವರು ಇಡೀ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಆದರೆ, ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ತನಿಖೆಗೆ ಸಮಯ ಮಿತಿಯನ್ನು ನಿಗದಿಪಡಿಸುವ ಅವಶ್ಯಕತೆಯಿದೆ. ಎಸ್ಐಟಿ ತನಿಖೆ ಇನ್ನೆಷ್ಟು ದಿನಗಳವರೆಗೆ ನಡೆಯುತ್ತದೆ ಎಂಬುದನ್ನು ತಿಳಿಸಬೇಕು. ಇದರ ಹಿಂದಿರುವ ಜನರು ಯಾರು, ಈ ಪಿತೂರಿಗೆ ಯಾರು ಹಣ ನೀಡಿದ್ದಾರೆ, ತಪ್ಪು ಮಾಹಿತಿ ಹರಡುತ್ತಿರುವವರು ಯಾರು, ಇದನ್ನು ತನಿಖೆ ಮಾಡಬೇಕು ಎಂದು ಹೇಳಿದರು.
