ಯಾರು ಈ ಪವಿತ್ರ ಗೌಡ…? ದರ್ಶನ್ ಗೂ ಈಕೆಗೂ ಏನು ಸಂಬಂಧ!?

ಯಾರು ಈ ಪವಿತ್ರ ಗೌಡ…? ದರ್ಶನ್ ಗೂ ಈಕೆಗೂ ಏನು ಸಂಬಂಧ!?

ಬೆಂಗಳೂರು: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.

ಹೌದು, ನಟ ದರ್ಶನ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಾಗಿದೆ. ನಿನ್ನೆ (ಜ. 24 ಬುದುವಾರ) ನಟಿ ಮತ್ತು ಮಾಡ್ರನ್ ಆಗಿರುವ ಪವಿತ್ರ ಗೌಡ ಅವರು ತಮ್ಮ instagram ನಲ್ಲಿ ದರ್ಶನ್ ಮತ್ತು ಪವಿತ್ರ ಅವರ ಮಗು ಜೊತೆಯಲ್ಲಿರುವ ಫೋಟೋವನ್ನು instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಒಂದು ದಶಕ ಕಳೆದಿದೆ, ಹಲವು ವರ್ಷಗಳಿದೆ. 10 ವರ್ಷಗಳ ರಿಲೇಷನ್‌ಶಿಪ್‌. ಥ್ಯಾಂಕ್‌ ಯು’ ಎಂದು ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಸಹ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಮತ್ತು ಲಾಭಕ್ಕಾಗಿ ಹತ್ತಿರವಾಗುತ್ತಾಳೆ. ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಈ ಚಿತ್ರಗಳು.

ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

 

 

 

 

 

 

 

 

Related