ಕುಕ್ಕರ್ ಯಾರೆ ಕೊಟ್ಟರು ವಿಸಿಲ್ ಹೊಡೆಯೋದು ಮಾತ್ರ ಮೋದಿ: ಅಶ್ವಥ್ ನಾರಾಯಣ್

ಕುಕ್ಕರ್ ಯಾರೆ ಕೊಟ್ಟರು ವಿಸಿಲ್ ಹೊಡೆಯೋದು ಮಾತ್ರ ಮೋದಿ: ಅಶ್ವಥ್ ನಾರಾಯಣ್

ಬೆಂಗಳೂರು: ರಾಜ್ಯದಲ್ಲಿ ಉರಿಬಿಸಿಲಿನ ಜೊತೆಗೆ ಲೋಕಸಭಾ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದು ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷ ನಾಯಕರು ಒಂದಲ್ಲ ಒಂದು ಆರೋಪ ಮಾಡುತ್ತಲೇ ಇದ್ದಾರೆ.

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್ ಅವರ ವಿರುದ್ಧ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರು ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಯಾರೆ ಕೊಟ್ಟರು ವಿಸಿಲ್ ಹೊಡೆಯೋದು ಮಾತ್ರ ಮೋದಿ ಅವರೆ ಎಂದು ಡಿಕೆ ಸುರೇಶ್ ಅವರಿಗೆ ಟಂಗ್ ಕೊಟ್ಟಿದ್ದಾರೆ. ಡಿಕೆ ಸುರೇಶ್ ಗೆ ಯಾಕೆ ಮತ ಹಾಕ್ತಾರೆ ಜನ?. ಅವರು ಏನು ಕೆಲಸ ಮಾಡಿದ್ದಾರೆ ಎಂದು ಶಾಸಕ ಅಶ್ವಥ್ ನಾರಾಯಣ್ ಪ್ರಶ್ನಿಸಿದ್ದಾರೆ.

ಭಯ ಇಲ್ಲದೇ ಜನ ಮತ ಹಾಗಬೇಕು. ಶಾಂತಿಯುತ ಮತದಾನ ಆಗಬೇಕು. ಈ ಕಾರಣಕ್ಕೆ ನಾವು ಪ್ಯಾರಾ ಮಿಲಿಟರಿ ದಳ ನಿಯೋಜನೆಗೆ ಕೇಳಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಭಯದ ವಾತಾವರಣ ಸೃಷ್ಟಿಸ್ತಿದೆ. ಭಯದ ವಾತಾವರಣ ಇದ್ರೇನೇ ಅವರಿಗೆ ಶಕ್ತಿ. ಜನರನ್ನ ಹತ್ತಿಕ್ಕುವುದು, ಗಲಾಟೆ ಸೃಷ್ಟಿಸೋದು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Related