ಸತ್ತ ವ್ಯಕ್ತಿ ಎದ್ದ ಬಂದಾಗ..!

ಸತ್ತ ವ್ಯಕ್ತಿ ಎದ್ದ ಬಂದಾಗ..!

ನೈರೋಬಿ : ವೈದ್ಯರು ವ್ಯಕ್ತಿಯೊಬ್ಬನು ಸತ್ತಿದ್ದಾನೆ ಎಂದು ಹೇಳಿದ ಮೂರು ಗಂಟೆಗಳ ನಂತರ ಕಣ್ಣು ಬಿಟ್ಟು ಕುಳಿತಿರುವ ಘಟನೆ ಕೀನ್ಯಾದಲ್ಲಿ ನಡೆದಿದೆ.

ಪೀಟರ್ ಕಿಗೆನ್ (32) ಎಂಬಾತನನ್ನು ಕೆರಿವೋ ಕೌಂಟಿಯಲ್ಲಿರುವ ಕಪ್ಕಾಟೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಪೀಟರ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು.

ಆಸ್ಪತ್ರೆ ಸಿಬ್ಬಂದಿ ಶವಗಾರದಲ್ಲಿ ಪೀರ‍್ನ ಶವ ಇಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಪೀಟರ್ ದಿಢೀರನೆ ಎದ್ದು ಕುಳಿತು ಕಾಲು ನೋವು ಎಂದು ಅಳಲು ಪ್ರಾರಂಭ ಮಾಡಿದ್ದಾನೆ.

ತಕ್ಷಣ ಆಸ್ಪತ್ರೆಯ ಸಿಬ್ಬಂದಿ ಪೀರ‍್ನನ್ನು ವರ‍್ಡ್ಗೆ ಕರೆತಂದು ಚಿಕಿತ್ಸೆ ಕೊಟ್ಟಿದ್ದಾರೆ. ಪೀಟರ್ ಬದುಕಿ ಬಂದಿರುವ ಬಗ್ಗೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Related