ಫೆಬ್ರವರಿ 14 ಕ್ಕೆ ಮದುವೆ ಕಾರಣವೇನು!

ಫೆಬ್ರವರಿ 14 ಕ್ಕೆ ಮದುವೆ ಕಾರಣವೇನು!

ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ ಮತ್ತು ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಅವರ ಮದುವೆ ಫೆಬ್ರವರಿ 14, 2021 ರಂದು ಫಿಕ್ಸಿ ಆಗಿದೆ. ಈಗ ಈ ಜೊಡಿ ಲವ್ ಮಾಕ್ ಟೇಲ್-2 ಸಿನಿಮಾ ದಲ್ಲಿ ಬ್ಯುಸಿ ಆಗಿದ್ದಾರೆ. ಶೇ 60 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ಈ ದಿನವೇ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಸೆಮಣೆ ಏರಲು ಏನು ವಿಶೇಷ ಎಂದು ಬಹಿರಂಗ ಪಡಿಸಿದ್ದಾರೆ.

ನಮ್ಮ ಇಬ್ಬರ ಕುಟುಂಬ ಸದಸ್ಯರು ಸೇರಿ ಈ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಮೊದಲು 2021 ಜೂನ್ ತಿಂಗಳಲ್ಲಿ ಮದುವೆ ಬಗ್ಗೆ ಐಡಿಯಾ ಮಾಡಿದ್ದರಂತೆ. ಆದರೆ ಕೃಷ್ಣನ ಮನೆಯಲ್ಲಿ ಕೇಳಿದಾಗ ಫೆಬ್ರವರಿ 14 ಎಂದು ಹೇಳಿದರು.

ಫೆಬ್ರವರಿ ತಿಂಗಳು ನಮಗೆ ತುಂಬಾ ವಿಶೇಷ ಹಾಗೂ ಲಕ್ಕಿ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಮ್ಮಿಬ್ಬರ ಫಸ್ಟ್ ಲವ್ ಮಾಕ್ ಟೇಲ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2021 ಫೆಬ್ರವರಿ ತಿಂಗಳಿನಲ್ಲಿ ಮದುವೆ ಸೆಲಿಬ್ರೇಷನ್ ಇದೆ. ಎಂದು ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ರವರು ವ್ಯಕ್ತಪಡಿಸಿದರು.

Related