ನಮಗೆ ಆ ವಿಕೃತ ಕಾಮಿ ಮುಖ್ಯವಲ್ಲ, 2000 ಹೆಣ್ಣು ಮಕ್ಕಳ ಭವಿಷ್ಯ ಮುಖ್ಯ: ಪ್ರಕಾಶ್ ರೈ

ನಮಗೆ ಆ ವಿಕೃತ ಕಾಮಿ ಮುಖ್ಯವಲ್ಲ, 2000 ಹೆಣ್ಣು ಮಕ್ಕಳ ಭವಿಷ್ಯ ಮುಖ್ಯ: ಪ್ರಕಾಶ್ ರೈ

ಹುಬ್ಬಳ್ಳಿ: ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸೇರಿದಂತೆ ಇಡೀ ದೇಶದಾದ್ಯಂತ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಅವರು ಪ್ರತಿಕ್ರಿಯೆಸಿದ್ದು, ಅಮಿತ್ ಶಾ ಅವರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ.

ನಗರದಲ್ಲಿಂದು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ನಿಮ್ಮ ಪಕ್ಷದ ಮಹಿಳೆಯರನ್ನ ಅಥವಾ ನಿಮ್ಮ ಜನರನ್ನ ಹೋಗಿ ಪ್ರತಿಭಟನೆಗಾದ್ರೂ ಮಾಡೋಕೆ ಹೇಳಿ ಎಂದು ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮಗೆ ಆ ವಿಕೃತ ಕಾಮಿ ಮುಖ್ಯವಲ್ಲ, 2000 ಹೆಣ್ಣು ಮಕ್ಕಳ ಭವಿಷ್ಯ ಮುಖ್ಯ ಎಂದು ಹೇಳಿದ್ದಾರೆ. ತನ್ನ ನೀಚ ಕೆಲಸಕ್ಕೆ ಹೆಣ್ಣು ಮಕ್ಕಳನ್ನು ಬಳಸಿಕೊಂಡು, ಆ ಹೆಣ್ಣು ಮಕ್ಕಳ ವಿಡಿಯೋವನ್ನು ಹರಿ ಬಿಟ್ಟಿದ್ದನಲ್ಲ ಇದು ಘೋರ ಅಪರಾಧ ಎಂದು ಖಂಡಿಸಿದ್ದಾರೆ. ಅವರವರ ರಾಜಕೀಯ ವಿಚಾರ ಬೇರೆ, ಆದರೆ ಈ ವಿಚಾರದಲ್ಲಿ ಹೆಣ್ಣು ಮಕ್ಕಳ ಜೀವನವನ್ನೇ ಹಾಳು ಮಾಡುತ್ತಿದ್ದರಲ್ಲ ಇವರಿಗೆ ಏನು ಮಾಡಬೇಕೆಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನು ಯಾಕೆ ಬಂಧಿಸಿಲ್ಲ? ಇದಕ್ಕೆ ಉತ್ತರ ನೀಡಿದ ಗೃಹ ಸಚಿವರು

ಬಿಜೆಪಿ ಚಾಣಕ್ಯ ಅಮಿತ್​​ ಶಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಲ್ಲ, ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಹೀಗೆ ಹೇಳುಲು ನಾಚಿಕೆ ಆಗುವುದಿಲ್ಲ. ಕೊನೆಯ ಪಕ್ಷ ನಿಮ್ಮ ಜನರನ್ನು, ಮಹಿಳೆಯನ್ನು ಇದರ ಬಗ್ಗೆ ಪ್ರತಿಭಟನೆ ಮಾಡಲು ಹೇಳಿ ಎಂದು ಅಮಿತ್​​ ಶಾ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಾರೆ.

 

Related