ಸದಾ ಯಂಗಾಗಿ ಇರ್ಬೇಕಾ? ಹಾಗಾದ್ರೆ ಈ ಎಲೆ ತಿನ್ನಿ!

ಸದಾ ಯಂಗಾಗಿ ಇರ್ಬೇಕಾ? ಹಾಗಾದ್ರೆ ಈ ಎಲೆ ತಿನ್ನಿ!

ಇತ್ತೀಚಿನ ದಿನಗಳಲ್ಲಿ ನಮ್ಮ ಒತ್ತಡದ ಜೀವನ, ಆಹಾರ ಪದ್ಧತಿಯಲ್ಲಿ ಏರುಪೇರು ಇನ್ನಿತರ ಸಮಸ್ಯೆಗಳಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಇದರಿಂದ ನಮ್ಮದ ನಮ್ಮ ಮುಖದ ಕಾಂತಿ ಕುಗ್ಗುತ್ತದೆ ವಯಸ್ ಆಗಿರುವಂತೆ ಕಾಣುತ್ತದೆ. ನಮಗೆ ಕಡಿಮೆ ವಯಸ್ಸಾಗಿದ್ದರು ಕೂಡ ಹೆಚ್ಚು ವಯಸ್ಸಾಗಿರುವಂತೆ ಕಾಣುತ್ತದೆ.

ಇನ್ನು ನಾವು ಸದಾ ಯಂಗ್ ಆಗಿರಲು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಕರಿಬೇವಿನ ಎಲೆ

ಎಲ್ಲರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕರಿಬೇವಿನ ಸೊಪ್ಪು ಇದ್ದೇ ಇರುತ್ತದೆ.  ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ 2 ರಿಂದ 3 ಎಲೆಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರದ ಜೊತೆಗೆ ಇನ್ನಿತರ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಇನ್ನು ಕರಿಬೇವಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಹಲವು ಕಾಯಿಲೆಗಳಿಗೆ ಪರಿಹಾರವಾಗಿದೆ.

ಅಶ್ವಗಂಧ

ಸನಾತನ ಕಾಲದಿಂದಲೂ ಅಶ್ವಗಂಧವನ್ನು ಬಳಸಲಾಗುತ್ತದೆ. ಈ ಅಶ್ವಗಂಧವನ್ನು ಬಳಸುವುದರಿಂದ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಆರೈಕೆಗಾಗಿ ವಯಸ್ಸಾದ ವಿರೋಧಿ ಮೂಲಿಕೆಯಾಗಿ ಪರಿಪೂರ್ಣವಾಗಿದೆ. ಇದು ಆಂಟಿ ಏಜಿಂಗ್ ಗುಣವನ್ನು ಹೊಂದಿದೆ. ಮಾತ್ರವಲ್ಲ, ಅಶ್ವಗಂಧವು ಫಲವತ್ತತೆಯನ್ನು ಸುಧಾರಿಸುತ್ತದೆ. ಕಡಿಮೆ ರಕ್ತದೊತ್ತಡ, ಸಂಧಿವಾತ ಚಿಕಿತ್ಸೆಗೆ ಸಹ ಇದು ಒಳ್ಳೆಯದು.

ತುಳಸಿ

ತುಳಸಿ ಗಿಡ ಸಾಮಾನ್ಯವಾಗಿ ಎಲ್ಲಾ ಹಿಂದುಗಳ ಮನೆ ಮುಂದೆ ಬಳಸಲಾಗುತ್ತದೆ. ತುಳಸಿ ಗಿಡದಲ್ಲಿ ಇರುವಂತಹ ರೋಗನಿರೋಧಕ ಶಕ್ತಿಯು ನಮ್ಮ ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸುತ್ತದೆ. ಚರ್ಮದ ಆರೈಕೆಗಾಗಿ ವಯಸ್ಸಾದ ವಿರೋಧಿ ಮೂಲಿಕೆ ಅವುಗಳಲ್ಲಿ ಒಂದಾಗಿದೆ. ತುಳಸಿಯ ಪರಿಣಾಮಕಾರಿತ್ವವು ಕುಂಕುಮಾದಿ ತೈಲಂ ಮತ್ತು ಇತರ ಗಿಡಮೂಲಿಕೆಗಳಂತೆಯೇ ಇರುತ್ತದೆ. ಇದು ಸೂರ್ಯನಿಂದ ಉಂಟಾಗುವ ಚರ್ಮದ ಹಾನಿಯನ್ನು ಕಡಿಮೆ ಮಾಡಲು, ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಚರ್ಮದಲ್ಲಿನ ಜಲಸಂಚಯನ ಮಟ್ಟವನ್ನು ಸುಧಾರಿಸಲು ಪರಿಣಾಮಕಾರಿಯಾಗಿ ಮಾಡುತ್ತದೆ.

 

Related