ಸ್ವಾಮಿ ವಿವೇಕಾನಂದ ಅವರು ಒಬ್ಬ ಮಹಾನ್ ವ್ಯಕ್ತಿ: ಸತೀಶ್ ರೆಡ್ಡಿ

ಸ್ವಾಮಿ ವಿವೇಕಾನಂದ ಅವರು ಒಬ್ಬ ಮಹಾನ್ ವ್ಯಕ್ತಿ: ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಇಂದು ದೇಶದಾದ್ಯಂತ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ದಿನಾಚರಣೆಯನ್ನು ಅತಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೊಮ್ಮನಹಳ್ಳಿಯ ಹೆಬ್ಬಾಗಿಲೆಂದು ಪ್ರಸಿದ್ಧವಾಗಿರುವ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಗೆ ಕಳೆದ 20 ವರ್ಷಗಳಿಂದಲೂ ಬೊಮ್ಮನಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಅದೇ ರೀತಿ ಈ ವರ್ಷವೂ ಕೂಡ ಬೊಮ್ಮನಹಳ್ಳಿ ಶಾಸಕ ಎಂ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯನ್ನು ಅತಿ ವಿಜೃಂಭಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.  ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಸ್ವಾಮಿ ವಿವೇಕಾನಂದ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸತೀಶ್ ರೆಡ್ಡಿ ಅವರು, ಸ್ವಾಮಿ ವಿವೇಕಾನಂದ ಅವರು ಇಂದಿನ ಪೀಳಿಗೆಗೂ ಕೂಡ ಮಾರ್ಗದರ್ಶಿಯಾಗಿದ್ದಾರೆ. ಹಿಂದುತ್ವವನ್ನು ಇಡೀ ರಾಷ್ಟ್ರಕ್ಕೆ ಸಾರಿದ ಮಹಾನ್ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದು ಕಾಂಗ್ರೆಸ್ನವರು ದೇವರ ಹೆಸರಿನಲ್ಲಿ ಕೂಡ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅವರ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಗೆ ಮುಸ್ಲಿಮರ ಮತ ಸೆಳೆಯಬೇಕೆಂದು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಮಂಜುನಾಥ್ ರೆಡ್ಡಿ, ಬೆಂಗಳೂರು ನಗರದ ಎಂಎಲ್ಸಿ ಗೋಪಿನಾಥ್ ರೆಡ್ಡಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related