ರೈತರನ್ನ ಸತಾಯಿಸುತ್ತಿದ್ದ ಬ್ಯಾಂಕ್

ರೈತರನ್ನ ಸತಾಯಿಸುತ್ತಿದ್ದ ಬ್ಯಾಂಕ್

ಯಡ್ರಾಮಿ:ತಾಲ್ಲೂಕಿನ ಮಳ್ಳಿಯಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ನೌಕರರು ರೈತರಿಗೆ, ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ವರ್ತನೆ ತೋರುತ್ತಿಲ್ಲ, ರೈತರ ಮತ್ತು ವಿದ್ಯಾರ್ಥಿಗಳ ಖಾತೆ ತೆರೆಯಲು ವಿಳಂಬ ಮಾಡುತ್ತಿದ್ದಾರೆ. ಯಾವಾಗ ಕೇಳಿದರು ಪಾಸ್‌ಬುಕ್ ಇಲ್ಲ, ನಾಳೆ ಬನ್ನಿ ಎಂದು ಸತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶಗೊಂಡರು.
ಸಕ್ಕರೆ ಕಾರ್ಖಾನೆ, ನೀರಾವರಿ ಪ್ರದೇಶ ಇರುವುದರಿಂದ ವ್ಯವಹಾರ ಹೆಚ್ಚಿದ್ದು, ಮಧ್ಯವರ್ತಿಗಳನ್ನು ಕರೆದುಕೊಂಡು ಬಂದ ರೈತರ ಕೆಲಸ ಬೇಗ ಮಾಡುವುದು, ನೇರವಾಗಿ ಬಂದ ರೈತರ ಕೆಲಸ ನಾಳೆ ಬನ್ನಿ ಎಂದು ದಿನ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತರು ತಮ್ಮ ಹೊಲದಲ್ಲಿ ಕೆಲಸ ಬಿಟ್ಟು ಬ್ಯಾಂಕ್ ಮುಂದೆ ಕುಂತು ಕೆಲಸ ಆಗದೆ ಮರಳಿ ಮನೆಗೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಮಧ್ಯವರ್ತಿಗಳ ಹಾವಳಿ ಕಡಿಮೆ ಮಾಡಿ, ನ್ಯಾಯ ದೊರಕಿಸಿ ಕೊಡಿ ಎಂದು ರೈತರು ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೌಕರರ ವರ್ತನೆಗೆ ಕಡಿವಾಣ ಹಾಕುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬ್ಯಾಂಕಿನ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಈ ಸಂದರ್ಭದಲ್ಲಿ ಶ್ರೀಕುಮಾರ, ಕಟ್ಟೀಮನಿ, ವಕಿಲರು, ಸಾಮಾಜಿಕ ಹೋರಾಟಗಾರ, ಶಿವಪ್ಪ, ಹೊಸಮನಿ, ಹಯ್ಯಾಳಪ್ಪ ಹೊಸಮನಿ, ಪ್ರಭು ಕಟ್ಟೀಮನಿ, ಬಸವರಾಜ, ಮಾಗಣಗೇರಾ, ರಂಜಾನ್, ಗುಂಡಕನಾಳ್, ರಮೇಶ ಇದ್ದರು.

Related