ಡಿಸಿ, ಎಸ್ಪಿಯಿಂದ ಪರಿಶೀಲನೆ

ಡಿಸಿ, ಎಸ್ಪಿಯಿಂದ ಪರಿಶೀಲನೆ

ಬಳ್ಳಾರಿ : ನಗರದ ನಲ್ಲಚೆರವು ಪ್ರದೇಶದಲ್ಲಿರುವ ವಾಲ್ಮೀಕಿ ಭವನವನ್ನು ಪೊಲೀಸ್ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಸದ್ಯಕ್ಕೆ 50 ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಎಎಸ್ಪಿ ಬಿ.ಎನ್.ಲಾವಣ್ಯ ಅವರು ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಿಸಿ ನಕುಲ್, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇನ್ನಿತರೆ ಇಲಾಖೆ ಅಧಿಕಾರಿಗಳ ವರ್ಗದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಾಗಿದೆ. ಈ ಕೇರ್ ಸೆಂಟರ್ ವಿಶೇಷವಾಗಿ ಪೊಲೀಸ್ ಸಿಬ್ಬಂದಿಗಾಗಿಯೇ ಸ್ಥಾಪಿಸಲಾಗಿದೆ.

ಪೊಲೀಸರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಎರಡನೇಯದಾಗಿ ಇನ್ನಿತರೆ ಅಧಿಕಾರ ವರ್ಗಕ್ಕೆ ಮೀಸಲಿರಿಸಲಾಗಿದೆ ಎಂದರು. ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ಅತೀ ಹೆಚ್ಚಾಗಿ ಕಂಡು ಬಂದಿದ್ದರಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಸ್ಪಿ ಸಿ.ಕೆ.ಬಾಬಾ ಅವರು ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಇದುವರೆಗೆ 1801 ಜನರಿಗೆ ತಪಾಸಣೆ ನಡೆಸಲಾಗಿದ್ದು, 296 ಜನರಿಗೆ ಕೋವಿಡ್ ಸೊಂಕಿರುವುದು ದೃಢಪಟ್ಟಿದೆ ಎಂದರು.

Related