2023ರವರೆಗೂ ಕೋವಿಡ್-19 ಲಸಿಕೆ ತಯಾರಿಕೆ 

2023ರವರೆಗೂ ಕೋವಿಡ್-19 ಲಸಿಕೆ ತಯಾರಿಕೆ 

ನ್ಯೂಯಾರ್ಕ್: ಕೊರೋನಾ ಸೋಂಕಿಗೆ ಔಷಧಿಗಳು ಲಭ್ಯವಿದೆ ಅವುಗಳನ್ನು ಖರೀದಿಸಿ, ಕ್ಷಿಪ್ರಗತಿಯಲ್ಲಿ ಎಲ್ಲಾ ರಾಷ್ಟ್ರಗಳಿಗೂ ಸಮಾನ ರೀತಿಯಲ್ಲಿ ದೊರೆಯುವಂತೆ ಪೂರೈಕೆ ಮಾಡಲಾಗುವುದು ಎಂದು ಯುನಿಸೆಫ್ ಹೇಳಿದೆ.

ಯುನಿಸೆಫ್ ವಿಶ್ವದ ಅತಿದೊಡ್ಡ ಲಸಿಕೆ ಖರೀದಿದಾರನಾಗಿದ್ದು, ವಾರ್ಷಿಕವಾಗಿ ವಾಡಿಕೆಯಂತೆ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಸುಮಾರು 2 ಬಿಲಿಯನ್ ಗೂ ಹೆಚ್ಚು ವಿವಿಧ ಲಸಿಕೆಗಳನ್ನು 100 ರಾಷ್ಟ್ರಗಳ ಪರವಾಗಿ ಖರೀದಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಸರ್ಕಾರಗಳು ಕೈ ಜೋಡಿಸಬೇಕು ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆನ್ರಿಯೆಟ್ಟಾ ಫೊರ್ ಹೇಳಿದ್ದಾರೆ.

ಹೆಚ್ಚಿನ ಆದಾಯವಿರುವ 80 ರಾಷ್ಟ್ರಗಳು ಔಷಧ ಖರೀದಿಸಲು ಬೆಂಬಲವನ್ನು ಸಹ ಯುನಿಸೆಫ್ ನೀಡುತ್ತಿದೆ. ತಮ್ಮ ಸ್ವಂತ ಹಣದಲ್ಲಿ ಔಷಧವನ್ನು ಖರೀದಿಸುವುದಾಗಿ ಹೇಳಿರುವ ಯುನಿಸೆಫ್, 170 ರಾಷ್ಟ್ರಗಳಿಗೆ ಕ್ಷಿಪ್ರಗತಿಯಲ್ಲಿ ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Related