ಲಸಿಕೆ ಕೊಡುವುದು ಹರಸಾಹಸ

ಲಸಿಕೆ ಕೊಡುವುದು ಹರಸಾಹಸ

ಸಂಡೂರು: ತಾಲೂಕಿನ ಗುಂಡ್ಲಹಳ್ಳಿ ಗ್ರಾಮದಲ್ಲಿ ಲಸಿಕಾ ಕೇಂದ್ರ ತೆರೆದು ಲಸಿಕೆ ಹಾಕಿಸಿಕೊಳ್ಳುವಂತೆ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು, ನಮ್ಮ ಹಳ್ಳಿಗೆ ಕೋವಿಡ್ ಭಯವಿಲ್ಲ ನಾವು ಸುರಕ್ಷಿತವಾಗಿ ಇದ್ದೇವೆ ನಮಗೆ ಲಸಿಕೆ ಬೇಡವೆಂದು ವಾಗ್ವಾದಕ್ಕೆ ಇಳಿಯುತ್ತಾರೆ ಇಲ್ಲಿಯ ಜನ, 772 ಜನಸಂಖ್ಯೆ ಉಳ್ಳ ಚಿಕ್ಕ ಗ್ರಾಮ ಎಮ್ ಗುಂಡ್ಲಹಳ್ಳಿಯಲ್ಲಿ ಲಸಿಕೆ ಹಾಕಲು 542 ಫಲಾನುಭವಿಗಳನ್ನು ಗುರುತಿಸಿದ್ದು. ಇಲ್ಲಿಯವರೆಗೆ ಕೇವಲ 53 ಜನರು ಮಾತ್ರ ಹಾಕಿಸಿಕೊಂಡಿದ್ದರು, ಆರೋಗ್ಯ ಇಲಾಖೆಯ ಒತ್ತಾಯದ ಮೇರೆಗೆ ಗಣಿ, ಕಾರ್ಖಾನೆಗೆ ಹೋಗುವವರು ಮತ್ತು ಕೆಲವು ಆಸಕ್ತಿ ಇರುವವರು ಮಾತ್ರ ಲಸಿಕೆ ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಾಧಿಕಾರಿ ಶಿವಪ್ಪ ಹೇಳಿದರು.

ಮಂಗಳವಾರ ಮನೆ ಮನೆಗೆ ಬೇಟಿನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಲಾಯಿತು, ಒಟ್ಟು 52 ಜನಕ್ಕೆ ಲಸಿಕೆ ನೀಡಲಾಯಿತು, ಒಟ್ಟು 105 ಜನರು ಮಾತ್ರ ಮೊದಲ ಡೋಸ್ ಪಡೆದಿದ್ದು ಕೇವಲ 11 ಜನರು ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ, ಕೋವಿಡ್ ಬಗ್ಗೆ ಭಯವೂ ಇದೆ ಹಾಗೇಯೇ ಲಸಿಕೆ ಬಗ್ಗೆಯೂ ಭಯ ಇದೆ, ಜ್ವರ, ಮೈಕೈ ನೋವು ಬರುವ ಬಗ್ಗೆಯೇ ಹೇಳುತ್ತಿದ್ದು ಅವರಿಗೆ ಲಸಿಕೆಯ ಭಯ ಹೋಗಲಾಡಿಸುವ ಪ್ರಯತ್ನ ಮಾಡಲಾಗಿ ಬಂದು ಲಸಿಕೆ ಪಡೆದರು. ನಂತರ ಮೇಸ್ತ್ರಿ ಸೋಮನಗೌಡ ಕುಟುಂಬದ ಆರು ಜನ ಬಂದು ಲಸಿಕೆ ಪಡೆದದ್ದು ನಮ್ಮ ಶ್ರಮ ಸಾರ್ಥಕವಾಯಿತು.

ಈ ಸಂದರ್ಭದಲ್ಲಿ ಎಮ್.ಎಮ್.ಉ.ತಂಡದ, ಡಾ.ಪೂಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸಂರಕ್ಷಣ ಅಧಿಕಾರಿ ಶಂಕ್ರಮ್ಮ, ಶೃತಿ, ಲತಾ, ನಾಗವೇಣಿ, ಶರತ್, ಆಶಾ ಕಾರ್ಯಕರ್ತೆ ಅನುಪಮಾ, ಗೌರಮ್ಮ, ಲಕ್ಷ್ಮಿದೇವಿ, ರುದ್ರಮ್ಮ, ಅಂಗನವಾಡಿ ಕಾರ್ಯಕರ್ತೆ ವೆಂಬ, ಕಾಳಮ್ಮ, ಯಾದವ ಸಂಘದ ಅಧ್ಯಕ್ಷರಾದ ಗವಿಸಿದ್ದ ಕೆ, ಶ್ರೀಕೃಷ್ಣ, ರಾಮಸ್ವಾಮಿ ಮುಂಖಡರಾದ ರಾಜಶೇಖರ, ರಾಮನಗೌಡ, ಚಿದಾನಂದಪ್ಪ, ಗಾದೆಪ್ಪ, ನಾಗರಾಜ ಇತರರು ಉಪಸ್ಥಿತರಿದ್ದರು.

Related