ಪಾದಗಳ ಅಂದಕ್ಕೆ ಬಾಳೆಹಣ್ಣಿನ ಸಿಪ್ಪೆ ಬಳಸಿ

ಪಾದಗಳ ಅಂದಕ್ಕೆ ಬಾಳೆಹಣ್ಣಿನ ಸಿಪ್ಪೆ ಬಳಸಿ

ಪ್ರತಿ ಸೀಸನ್ನಲ್ಲೂ ಅತಿ ಅಗದ ಬೆಲೆಯಲ್ಲಿ ಸಿಗುವ ಹಣ್ಣೆಂದರೆ ಅದು ಬಾಳೆಹಣ್ಣು. ಈ ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲ ಸೀಸನ್ನಲ್ಲೂ ದೊರೆಯುತ್ತದೆ. ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಬಾಳೆಹಣ್ಣು ಸೇವನೆಯಿಂದ ನಾವು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಕೇವಲ ಬಾಳೆಹಣ್ಣು ಮಾತ್ರವಲ್ಲದೆ ಬಾಳೆಹಣ್ಣಿನ ಸಿಪ್ಪೆಯಲ್ಲೂ ಸಹ ವಿವಿಧ ರೀತಿಯ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತೆ?.

ಅನೇಕ ಮಂದಿ ಹಸಿವಾದಾಗ ಬಾಳೆಹಣ್ಣನ್ನು ತಿನ್ನುತ್ತಾರೆ. ತಿಂದ ನಂತರ ಅದರ ಸಿಪ್ಪೆಯನ್ನು ತಿಪ್ಪೆಗೆ ಎಸೆಯುತ್ತಾರೆ. ಆದರೆ ನೀವು ವೇಸ್ಟ್ ಅಂದುಕೊಂಡಿರುವ ಬಾಳೆಹಣ್ಣಿನ ಸಿಪ್ಪೆಯೂ ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ.

ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸುವುದಲ್ಲದೇ ಕೈ-ಕಾಲುಗಳ ತ್ವಚೆಯನ್ನು ಆರೋಗ್ಯವಾಗಿಡುತ್ತದೆ.

ನೀವು ಪೆಡಿಕ್ಯೂರ್ ಮಾಡಿಸಿಕೊಳ್ಳಲು ಆಗಾಗ ಪಾರ್ಲರ್ಗೆ ಹೋಗುವವರಾಗಿದ್ದರೆ, ಇನ್ಮುಂದೆ ಹೋಗಬೇಡಿ. ಬದಲಿಗೆ ಮನೆಯಲ್ಲಿಯೇ ಸುಲಭವಾಗಿ ಬಾಳೆಹಣ್ಣಿನ ಸಿಪ್ಪೆಯಿಂದ ಪೆಡಿಕ್ಯೂರ್ ಮಾಡಿಕೊಳ್ಳಿ. ಇದು ಪಾದದ ತ್ವಚೆಯನ್ನು ಸ್ವಚ್ಛವಾಗಿಡುವುದರ ಜೊತೆಗೆ ಅದರಲ್ಲಿರುವ ಕೊಳೆಯೂ ಸಹ ಹೋಗುತ್ತದೆ. ಬಾಳೆಹಣ್ಣಿನ ಸಿಪ್ಪೆಯಿಂದ ಪೆಡಿಕ್ಯೂರ್ ಮಾಡುವುದರಿಂದ ಚರ್ಮವು ಮೃದು ಮತ್ತು ಸ್ವಚ್ಛವಾಗುತ್ತದೆ.

ಮೊದಲು ಪಾದಗಳನ್ನು ಸ್ವಚ್ಛಗೊಳಿಸಿ. ಈಗ ಬಾಳೆಹಣ್ಣಿನ ಸಿಪ್ಪೆಯಿಂದ ಪಾದಗಳ ಚರ್ಮವನ್ನು ಚೆನ್ನಾಗಿ ಉಜ್ಜಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳು ಮತ್ತು ಪಾದಗಳ ಕೊಳೆ ನಿವಾರಣೆಯಾಗುತ್ತದೆ ಮತ್ತು ಪಾದಗಳು ಸ್ವಚ್ಛವಾಗಿ ಕಾಣುತ್ತವೆ.

ಅನೇಕ ಮಂದಿ ಚಳಿಗಾಲದಲ್ಲಿ ಪಾದದ ಬಿರುಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ಪಾದದ ಮೇಲೆ ಉಜ್ಜಿ ಸ್ವಲ್ಪ ಹೊತ್ತು ಬಿಡಿ. ನಂತರ ಪಾದವನ್ನು ನೀರಿನಿಂದ ಸ್ವಚ್ಛಗೊಳಿಸಿ.

ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಸ್ವಲ್ಪ ಅಡಿಗೆ ಸೋಡಾವನ್ನು ಬೆರೆಸಿ, ನಿಮ್ಮ ಪಾದಗಳನ್ನು ಉಜ್ಜಿ 5 ನಿಮಿಷಗಳ ಕಾಲ ಬಿಡಿ. ಈಗ ಸ್ವಲ್ಪ ಅಡಿಗೆ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ. ಸ್ವಲ್ಪ ಸಮಯದವರೆಗೆ ನಿಮ್ಮ ಪಾದಗಳನ್ನು ಅದರಲ್ಲಿ ನೆನೆಸಿ, ನಂತರ ಟವೆಲ್ನಿಂದ ಒರೆಸಿ, ಕ್ರೀಮ್ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿ.

ಬಾಳೆಹಣ್ಣಿನ ಸಿಪ್ಪೆ, ಮೊಸರು, ಜೇನುತುಪ್ಪವನ್ನು ಮಿಕ್ಸಿಯಲ್ಲಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಪಾದಗಳು ಮತ್ತು ಕಾಲುಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ನಂತರ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

Related