ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ

  • In State
  • August 25, 2021
  • 438 Views
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ

ಕಮಲನಗರ : ತಾಲೂಕಿನ ದೊಡ್ಡ ಠಾಣಾ ಕುಶನೂರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು, ನಾಡಕಚೇರಿಯ ಎದುರು ಪ್ರತಿಭಟನೆ ನಡೆಸಲು ಗ್ರಾಮದ ಮುಖಂಡ ಜಗನ್ನಾಥ್ ಪಸಾರ ಅವರ ನೇತೃತ್ವದಲ್ಲಿ ಆರೋಗ್ಯ ಸಚಿವರಿಗೆ ತಿಳಿಸಿ ಎಂದು ತಹಶೀಲ್ದಾರ್‌ಗೆ ಬುಧವಾರ ಮನವಿ ಪಾತ್ರ ಸಲ್ಲಿಸಿದ್ದಾರೆ.

ಗ್ರಾಮದ ಮುಖಂಡ ಜಗನ್ನಾಥ್ ಮಾತನಾಡಿ, ಈ ಗ್ರಾಮದಲ್ಲಿ 35 ಸಾವಿರ ಜನಸಂಖ್ಯೆ ಇದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 25 ಹಳ್ಳಿಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲು ಮುಂದಾಗಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಠಾಣಾ ಕುಶನೂರ ಹಿರಿಯ ಗ್ರಾ. ಪಂ. ಸದಸ್ಯ ಕಾಶಿನಾಥ ಜಿರಗೆ ಮಾತನಾಡಿ , ಆರೋಗ್ಯ ಕೇಂದ್ರದಲ್ಲಿ ತಜ್ಞರ ಕೊರತೆಯಿಂದ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳು ಸುಲಭವಾಗಿ ದೊರೆಯುತ್ತಿಲ್ಲ. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಮುಂದಾಗಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಈ ವೇಳೆ ಸಿದ್ದಲಿಂಗಠಿಸ್ವಾಮಿ, ಗಂಗಾರಾಮ್ ಮಾನೂರೆ, ಚಾಂದಪಾಶಾ, ಲಕ್ಷ್ಮಣರಾವ್ ಗಾದಗೆ, ವಿಠ್ಠಲ ರಾವ ಬಿರಾದಾರ, ವೀರೇಂದ್ರ ಸ್ವಾಮಿ, ಮಹೇಶ್ ಕೊಟ್ಟೆ, ಸೂರ್ಯಕಾಂತ್ ಮಾನೆ, ವೈಜಿನಾಥ ಸಾಗಾವೆ, ಶಿವಾನಂದ ಸಾವಳೆ, ಸಂಜು ಪಾಟೀಲ, ಸತೀಶ್ ಬಿರಾದಾರ, ವಿಜಯಕುಮಾರ ಬಿರಾದಾರ ಇನ್ನಿತರರಿದರು.

Related