ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ ಅವರ ಏಕ ವ್ಯಕ್ತಿ ಅಭಿನಯದ “ಶರ್ಮಿಷ್ಠೆ” ನಾಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಸೇರಿದಂತೆ ಸಚಿವ ಸಂಪುಟದ ಅನೇಕರು ವೀಕ್ಷಿಸಿದರು.
ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಜನಸೇವೆ ಮಾಡುವ ಜೊತೆಗೆ ಆಗಾಗ್ಗೆ ಧಾರವಾಹಿ, ಚಲನಚಿತ್ರ, ನಾಟಕಗಳಲ್ಲಿ ಅಭಿನಯಿಸುತ್ತಾ ಕಲಾಸೇವೆ ಮಾಡುವ ಉಮಾಶ್ರೀ ಅವರು ನಾಡಿನ ಹೆಮ್ಮೆಯ ಕಲಾವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಭವ್ಯ “ಧರ್ಮಯಾತ್ರೆ”
ಇಂದಿನ ಶರ್ಮಿಷ್ಠೆ ನಾಟಕದಲ್ಲಿ ಅವರ ಅಭಿಯನ ಮನೋಜ್ಞವಾಗಿತ್ತು. ಕಲಾಸರಸ್ವತಿಯ ಒಲವು ಅವರ ಮೇಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆಯೇ ಜನಸೇವೆಯ ಜೊತೆಗೆ ಕಲಾಸೇವೆಯ ಅವರ ಕಾರ್ಯಕ್ಕೆ ಯಾವ ಅಡೆತಡೆಗಳಿಲ್ಲದೆ ಸಾಗಲಿ ಎಂದು ಹಾರೈಸಿದರು.
