ಬೆಂಗಳೂರು: ಬೊಮ್ಮನಹಳ್ಳಿಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಂ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಇಂದು (ಶನಿವಾರ ಆಗಸ್ಟ್ 23) ಧರ್ಮಸ್ಥಳಕ್ಕೆ ಧರ್ಮ ಯಾತ್ರೆಯನ್ನು ಕೈಗೊಂಡಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ಧರ್ಮಸ್ಥಳ ಶ್ರೀ ಕ್ಷೇತ್ರದತ್ತ ಭವ್ಯ “ಧರ್ಮಯಾತ್ರೆ” ಇಂದು ಪ್ರಾರಂಭಗೊಂಡಿದ್ದು, ಶಾಸಕರಾದ ಎಂ. ಸತೀಶ್ ರೆಡ್ಡಿಯವರು ಯಾತ್ರೆಗೆ ಭವ್ಯ ಉದ್ಘಾಟನೆ ನೆರವೇರಿಸಿ, ಭಕ್ತರೊಂದಿಗೆ ಧಾರ್ಮಿಕ ರ್ಯಾಲಿಯನ್ನು ಪ್ರಾರಂಭಿಸಿದರು.
ಇನ್ನು ಈ ಯಾತ್ರೆಯ ಉದ್ದೇಶವೆನೆಂದರೆ, ಭಕ್ತಿಯಲ್ಲಿ ಏಕತೆ, ಧರ್ಮದಲ್ಲಿ ಶ್ರದ್ಧೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಈ ಬಾರಿ ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್
ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಸ್ಥಳದ ಧರ್ಮರಕ್ಷಣಾ ಯಾತ್ರೆ ಹೆಸರಿನಲ್ಲಿ ನೂರಾರು ಕಾರುಗಳು ಹಾಗೂ ಬಸ್ಸುಗಳಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ತೆರಳಿದರು.
