ರಸಗೊಬ್ಬರಕ್ಕೆ ದುಪ್ಪಟ್ಟು ದರ

ರಸಗೊಬ್ಬರಕ್ಕೆ ದುಪ್ಪಟ್ಟು ದರ

ಗಂಗಾವತಿ : ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳ ಪ್ರದೇಶಗಳಲ್ಲಿ ಒಳ್ಳೆಯ ಮಳೆಯಾಗಿದ್ದರಿಂದ, ಭತ್ತ ನಾಟಿ ಸಂಪೂರ್ಣಗೊAಡಿದೆ ಹಾಗೂ ಒಣ ಬೇಸಾಯ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳಿದ್ದು, ಈಗ ರೈತರಿಗೆ ಅವಶ್ಯವಾಗಿರುವ ರಸಗೊಬ್ಬರ ಸರಿಯಾಗಿ ಪೂರೈಕೆಯಾಗದೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಆರೋಪಿಸಿದ್ದಾರೆ.

ಸಹಾಯಕ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಾಯಕರು, ಸರ್ಕಾರದ ಪ್ರಕಾರ 45 ಕೆಜಿ ಯೂರಿಯಾ ಗೊಬ್ಬರಕ್ಕೆ 261 ರೂ. ಇದ್ದರೆ, ಕಾಳ ಸಂತೆಯಲ್ಲಿ 370 ರಿಂದ 400 ರೂ. ಗಳವರೆಗೆ ಮಾರಾಟವಾಗುತ್ತಿದೆ. ಒಂದು ಚೀಲಕ್ಕೆ 150 ರೂ. ಹೆಚ್ಚಿಗೆ ದರ ಪಡೆದುಕೊಂಡು ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ.

ಒಂದು ವೇಳೆ ರೈತರಿಗೆ ಗೊಬ್ಬರ ಸಿಗದಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ, ಬೀದಿ-ಬೀದಿಯಲ್ಲಿ ಯೂರಿಯಾ ಗೊಬ್ಬರ ಸಲುವಾಗಿ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ.

Related