ಸಿದ್ದಗಂಗಾ ಮಠಕ್ಕೆ ಕೋಲ್ಡ್ ಸ್ಟೋರೇಜ್

ಸಿದ್ದಗಂಗಾ ಮಠಕ್ಕೆ ಕೋಲ್ಡ್ ಸ್ಟೋರೇಜ್

ತುಮಕೂರು :ಸಿದ್ದಗಂಗಾ ಮಠದಲ್ಲಿ ೧೦ ರಿಂದ ೧೨ ಸಾವಿರ ಮಕ್ಕಳು ಪ್ರತಿನಿತ್ಯ ಊಟ ಮಾಡುವುದರಿಂದ ತರಕಾರಿ ಸಂಗ್ರಹಣೆ ಮಾಡುವುದು ಕಷ್ಟವಾಗುತ್ತಿದೆ ಹಾಗಾಗಿ ಮಠಕ್ಕೆ ಕೃಷಿ ಇಲಾಖೆಯು ನಬಾರ್ಡ್ನಿಂದ ೭.೫ ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್‌ನ್ನು ನಿರ್ಮಾಣ ಮಾಡಲು ಹಣ ಮಂಜೂರು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಶ್ರೀ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಸಚಿವರು ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಲಾಭ ಬರುವ ಯಾವ ಬೆಳೆಯನ್ನು ಬೇಕಾದರು ಬೆಳೆಯಲಿ ಸರ್ಕಾರ ಅವರಿಗೆ ಬಿತ್ತನೆ ಬೀಜದ ವ್ಯವಸ್ಥೆ ಮಾಡುವ ಕಾರ್ಯಮಾಡುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರು ಮಾರಾಟ ಮಾಡುವ ಸ್ವಾತಂತ್ರö ರೈತರಿಗೆ ಇದೆ. ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಸಂಪೂರ್ಣ ಅನುಕೂಲವಾಗುತ್ತದೆ. ಎಂ.ಎನ್.ಸಿ. ಕಂಪನಿಯವರು ನೇರವಾಗಿ ರೈತರ ಹೊಲಗಳಿಗೆ ಹೋಗಿ ಅವರ ಬೆಳೆಗಳನ್ನು ಕೊಂಡುಕೊಳ್ಳುತ್ತಾರೆ, ಇದರಿಂದ ಯಾವುದೇ ರೀತಿಯ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ಮತ್ತಿತರರಿದ್ದರು.

Related