ಭಾರತೀಯರ ವೈಯಕ್ತಿಕ ಮಾಹಿತಿ ಲೀಕ್?

ಭಾರತೀಯರ ವೈಯಕ್ತಿಕ ಮಾಹಿತಿ ಲೀಕ್?

ನವದೆಹಲಿ : ಟ್ರೂ ಕಾಲರ್ ನಲ್ಲಿರುವ 4.75 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ ವೆಬ್‍ನಲ್ಲಿ ಸುಮಾರು 75,000 ರೂ ಗಳಿಗೆ ಮಾರಾಟ ಮಾಡಲಾಗಿದೆ ಎಂದು ಆನ್‍ಲೈನ್ ಗುಪ್ತಚರ ಸಂಸ್ಥೆ ಸೈಬಲ್ ವರದಿ ಮಾಡಿದೆ. ಆದಾಗ್ಯೂ ಟ್ರೂ ಕಾಲರ್ ಈ ವರದಿಯನ್ನು ನಿರಾಕರಿಸಿದ್ದು ಯಾವುದೇ ಡೇಟಾ ಬೇಸ್ ಉಲ್ಲಂಘನೆಯಾಗಿಲ್ಲ ಎಂಬ ಮಾಹಿತಿ ನೀಡಿದೆ.

2019ರಿಂದ ಟ್ರೂ ಕಾಲರ್ ನಲ್ಲಿರುವ ಮಾಹಿತಿಗಳು ಡಾರ್ಕ್ ವೆಬ್‍ನಲ್ಲಿ ಲಭ್ಯವಿದ್ದು, ಇವುಗಳನ್ನು ರಾಜ್ಯಗಳು, ನಗರಗಳು ಮತ್ತು ಉದ್ಯೋಗದ ಆಧಾರದ ಮೇಲೆ ವರ್ಗೀಕರಿಸಲಾಗಿದೆ ಎಂದು ಸೈಬಲ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಇದೀಗ ಡಾರ್ಕ್ ವೆಬ್ ನಲ್ಲಿ 4.75 ಕೋಟಿ ಭಾರತೀಯರ ಫೋನ್ ನಂಬರ್, ಉದ್ಯೋಗ, ಹೆಸರು, ಲಿಂಗ, ಇಮೇಲ್ ವಿಳಾಸ, ಫೇಸ್‍ಬುಕ್ ಐಡಿ ಮತ್ತು ಹೆಚ್ಚಿನದನ್ನು ಒಳಗೊಂಡಿದೆ ಎಂದು ಹಿಂದೂ ಸ್ಥಾನ್ ಟೈಮ್ಸ್ ನೀಡಿರುವ ವರದಿಯಲ್ಲಿ ಹೇಳಲಾಗಿದೆ.

ಸೋರಿಕೆಯಾಗಿರುವ ಸಂಪೂರ್ಣ ವಿವರಗಳನ್ನು ಸೈಬಲ್ ತನ್ನ ಬ್ಲಾಗ್  ಪೋಸ್ಟ್ ನಲ್ಲಿ ಪ್ರಕಟಿಸಿದೆ. ಮತ್ತೊಂದೆಡೆ ಟ್ರೂ -ಕಾಲರ್ ಈ ವರದಿಯನ್ನು ನಿರಾಕರಿಸಿದ್ದು ಮತ್ತು ಸೈಬಲ್ ಪ್ರತಿಪಾದಿಸಿದಂತೆ ಯಾವುದೇ ಡೇಟಾ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Related