ಬಕ್ರೀದ್ ಪ್ರಯುಕ್ತ ಪೊಲೀಸರಿಂದ ಪಥ ಸಂಚಲನ

ಬಕ್ರೀದ್ ಪ್ರಯುಕ್ತ ಪೊಲೀಸರಿಂದ ಪಥ ಸಂಚಲನ

ಶಹಾಪುರ : ಶಾಂತಿ ಹಾಗೂ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಅತ್ಯಂತ ಶಾಂತಿ ಸೌಹಾರ್ಧಯುತವಾಗಿ ಆಚರಿಸಬೇಕೆಂದು ನಗರ ಠಾಣೆಯ ಪಿಐ ಚೆನ್ನಯ್ಯ ಹಿರೇಮಠ ತಿಳಿಸಿದರು.

ಬಕ್ರೀದ್ ಹಬ್ಬದ ಪ್ರಯುಕ್ತವಾಗಿ ಮಂಗಳವಾರ ನಗರದ ವಿವಿಧ ರಸ್ತೆಗಳ ಮೂಲಕ ಪೊಲೀಸರಿಂದ ಪಥಸಂಚಲನ ನಡೆಸಿ ಕೊರೋನಾ ನಿಮಿತ್ತ ಹಲವಾರು ಮಾರ್ಗಸೂಚಿಗಳನ್ನು ಕುರಿತು ಜಾಗೃತಿ ಮೂಡಿಸಿದರು.
ಅಂದು ನಡೆಯುವ ಹಬ್ಬದಂದು ನಗರದ ಯಾವುದೇ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದ್ದು  ಬದಲಾಗಿ ನಗರದಲ್ಲಿರುವ ಸುಮಾರು 16 ಮಸೀದಿಗಳಲ್ಲಿ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಜನರು ಮಾತ್ರ ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶೇಷವಾಗಿ 6 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷದ ವಯೋವೃದ್ಧರು ಸಾಮೂಹಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ವಿರುವುದಿಲ್ಲ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಬಲಿದಾನ ಮಾಡಲು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಹಬ್ಬದ ಪ್ರಯುಕ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು ಸರ್ವರೂ ಸಹಕರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಶಾಂತಿಯುತವಾಗಿ ಆಚರಿಸಬೇಕು ಎಂದು ತಿಳಿಸಿದರು.

ಸುಮಾರು 50ಕ್ಕೂ ಅಧಿಕ ಪೊಲೀಸರು ನಗರದ ಪ್ರಮುಖ ಬಡಾವಣೆಗಳಲ್ಲಿ ಪಥಸಂಚಲನ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.

Related