ನಾಳೆ ಭಾರತ-ಇಂಗ್ಲೆಂಡ್ ಸೆಣಸಾಟ

ನಾಳೆ ಭಾರತ-ಇಂಗ್ಲೆಂಡ್ ಸೆಣಸಾಟ

ಸಿಡ್ನಿ, ಮಾ. 4 : ನಾಳೆ ಭಾರತ ಮತ್ತು ಇಂಗ್ಲೆಂಡ್ ವನಿತಾ ಟಿ20 ವಿಶ್ವಕಪ್ ಸೆಮಿಫೈನಲ್ ಹೋರಾಟಕ್ಕೆ ವೇದಿಕೆ ಸಿದ್ಧ. ಅಜೇಯ ಭಾರತ, ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್ ಹಂತಕ್ಕೇರಿವೆ. ಗುರುವಾರ ನಡೆಯುವ ಸೆಮಿಫೈನಲ್ ಹೋರಾಟದಲ್ಲಿ ಭಾರತವು ಇಂಗ್ಲೆಂಡ್ ಸವಾಲನ್ನು ಎದುರಿಸಲ್ಲಿದೆ. ಆಸ್ಟ್ರೇಲಿಯವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ.
ದ. ಆಫ್ರಿಕಾಕ್ಕೆ ಮಳೆಯ ಲಾಭ : ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಲೀಗ್ ಪಂದ್ಯ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇತ್ತಂಡಗಳಿಗೂ ಒಂದೊಂದು ಅಂಕ ನೀಡಲಾಯಿತು. ಈ ಒಂದು ಅಂಕದ ಲಾಭವೆತ್ತಿದ ದಕ್ಷಿಣ ಆಫ್ರಿಕಾ “ಬಿ’ ಗುಂಪಿನ ಅಗ್ರಸ್ಥಾನ ಅಲಂಕರಿಸಿದರೆ ಇಂಗ್ಲೆಂಡ್ ದ್ವಿತೀಯ ಸ್ಥಾನಕ್ಕೆ ಕುಸಿಯಿತು. ಇದರಿಂದಾಗಿ ಇಂಗ್ಲೆಂಡ್ “ಎ’ ವಿಭಾಗದ ಅಗ್ರಸ್ಥಾನಿ ಅಜೇಯ ಭಾರತದ ವಿರುದ್ಧ ಸೆಮಿಫೈನಲ್ನಲ್ಲಿ ಆಡಲಿದೆ.
ಫೈನಲ್ ನಿರೀಕ್ಷೆಯಲ್ಲಿ ಭಾರತ : ಭಾರತ ಇದುವರೆಗೆ ಟಿ20 ವಿಶ್ವಕಪ್ನಲ್ಲಿ ಫೈನಲ್ ಪ್ರವೇಶ ಪಡೆದಿಲ್ಲ. ಈ ಸಲ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ ಭಾರತಕ್ಕೆ ಲಭಿಸಿದೆ. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ಚಾಂಪಿಯನ್ ಎನಿಸಿಕೊಳ್ಳುವ ಉತ್ಸಾಹದಲ್ಲಿದೆ.
ಗುರುವಾರ ನಡೆಯುವ ಇನ್ನೊಂದು ಸೆಮಿಫೈನಲ್ ಪಂದ್ಯವು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

Related