ರಾಜ್ಯದಲ್ಲಿ ಮತ್ತಷ್ಟು ಟೊಮೇಟೊ ಬೆಲೆ ಏರಿಕೆಯಾಗುವ ಸಾಧ್ಯತೆ

ರಾಜ್ಯದಲ್ಲಿ ಮತ್ತಷ್ಟು ಟೊಮೇಟೊ ಬೆಲೆ ಏರಿಕೆಯಾಗುವ ಸಾಧ್ಯತೆ

ಬೆಂಗಳೂರು: ರಾಜ್ಯದ ಜನ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಈ ಬೆಲೆ ಏರಿಕೆಯಿಂದ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಗ್ರಾಹಕರು ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಆದರೆ ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ರೈತರ ಮುಖದಲ್ಲಿ ಎಲ್ಲಿಲ್ಲದ ಸಂತೋಷ ಉಂಟಾಗುತ್ತಿದೆ.

ಹೀಗಿರುವಾಗ ರಾಜ್ಯದಲ್ಲಿ ಇದೇ ರೀತಿ ಸದತವಾಗಿ ಮಳೆಯಾದರೆ ಟೊಮ್ಯಾಟೋ ಬೆಲೆ ಇನ್ನು ದುಪ್ಪಟ್ಟಾಗುವ ಸಂಶಯವಿಲ್ಲವೆಂದು ಗೊತ್ತಾಗುತ್ತಿದೆ.

ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆಯಿಂದ ಬೆಳೆ ಹಾನಿಯಾಗಿದ್ದ ಪರಿಣಾಮ ಬೆಲೆ ಏರಿಕೆಯಾಗಿತ್ತು. ಇದೀಗ ಅತಿಯಾದ ಮಳೆಯಿಂದ ಟೊಮೇಟೊ ಬೆಳೆಗೆ ಭಾರಿ ಹೊಡೆತ ಬಿದಿದ್ದು, ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಹೀಗಾಗಿ ಅತಿಯಾದ ಮಳೆಯಿಂದ ಕಟಾವಿಗೆ ಬಂದ ಬಳೆ ನಾಶವಾಗುತ್ತಿದ್ದು, ಇದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

 

Related