ಕಾಟಾಚಾರದ ನೈಟ್ ಕರ್ಫ್ಯೂಗೆ : ಸಾರ್ವಜನಿಕರ ಆಕ್ರೋಶ

ಕಾಟಾಚಾರದ ನೈಟ್ ಕರ್ಫ್ಯೂಗೆ : ಸಾರ್ವಜನಿಕರ ಆಕ್ರೋಶ

ಬೆಂಗಳೂರು :   ಕಾಟಾಚಾರದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಓಡಾಡದ ಸಂದರ್ಭದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.

ಡಿ.24 ರಂದು ರಾತ್ರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಇಂದಿನಿಂದಲೇ  ನೈಟ್ ಕರ್ಫ್ಯೂ ಜಾರಿಯಾದರೆ ಜನರಿಗೆ ಕಷ್ಟವಾಗುತ್ತದೆ ಎಂದು ನಾಳೆಯಿಂದ ನೈಟ್ ಕರ್ಫ್ಯೂ ಜಾರಿಗೆ ತೀರ್ಮಾನಿಸಲಾಗಿದೆ.

ಈ ವೇಳೆ ಬಸ್‌ಗಳು ಓಡಾಡಬಹುದು ಆಟೋ-ಟ್ಯಾಕ್ಸಿ ಸಂಚರಿಸಬಹುದು. ಗೂಡ್ಸ್ ವಾಹನ ಸಂಚರಿಸಬಹುದು. ಇದೆಲ್ಲಾ ಕಾಟಾಚಾರದ ನೈಟ್ ಕರ್ಫ್ಯೂ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಕೊರೋನಾ ತಡೆಗೆ ಸರ್ಕಾರ ಬಿಗಿ ಕ್ರಮಕೈಗೊಂಡಿತ್ತು. ಜನ ನಿರ್ಲಕ್ಷ್ಯ ತೋರಿದ್ದರಿಂದ ಕೊರೋನಾ ಹೆಚ್ಚಾಯ್ತು ಎಂದು ಸರ್ಕಾರ ಹೇಳಿದ್ರೆ ಅದು ಸರ್ಕಾರದ ವಿಫಲತೆಯಾಗುತ್ತೆ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ಸರ್ಕಾರದ ಈ ಕಾಟಾಚಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ ಚಾಟಿ ಬೀಸಿದ್ದು, ರಾತ್ರಿ ಮಾತ್ರ ಎಚ್ಚರವಿರಲು ಕೊರೋನಾ ಏನು ಗೂಬೇನಾ? ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬಿಟ್ಟುಕೊಂಡಿರುವುದು ಸರ್ಕಾರದ ನಿರ್ಲಕ್ಷ್ಯ ತೋರುತ್ತದೆ ಎಂದು ಕಿಡಿಕಾರಿದ್ದಾರೆ.

Related