ಟಿಕ್ ಟಾಕ್ ಮನರಂಜನೆ ನೀಡಿದ ಚಹಲ್.!

ಟಿಕ್ ಟಾಕ್ ಮನರಂಜನೆ ನೀಡಿದ ಚಹಲ್.!

ನವದೆಹಲಿ, ಮಾ. 20 : ಟೀಮ್ ಇಂಡಿಯ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಕೊರೊನಾದಿಂದಾಗಿ ಕ್ರಿಕೆಟಿಗರೆಲ್ಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚಹಲ್ ಕೂಡ ಮೆನೆಯಲ್ಲೆ ಟಿಕ್ ಟಾಕ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಗೂಗ್ಲಿ ಮಾಸ್ಟರ್ ಚಹಲ್ ಆನ್ ಫೀಲ್ಡ್ನಲ್ಲಿ ಒಬ್ಬ ಒಳ್ಳೆ ಬೌಲರ್ ಎನ್ನೋದು ನಿಮಗೆಲ್ಲಾ ಗೊತ್ತಿರುವ ವಿಚಾರ. ಅದೇ ಆಫ್ ದೀ ಫೀಲ್ಡ್ನಲ್ಲಿ ಗ್ರೇಟ್ ಎಂಟರ್ಟೈನರ್ ಮಾಡುವ ಕ್ರಿಕೆಟಿಗ. ಆಫ್ ದೀ ಫೀಲ್ಡ್ನಲ್ಲಿ ತಂಡದ ಸಹ ಆಟಗಾರರ ಜತೆಗೆ ಯಾವಾಗಲೂ ಮೋಜು ಮಸ್ತಿ ಮಾಡಿಕೊಂಡಿರುವ ಈ ಲೆಗ್ ಸ್ಪಿನ್ನರ್ ತಮ್ಮ ಚಹಲ್ ಟಿವಿ ಮೂಲಕವೇ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಆನ್ ಫೀಲ್ಡ್ನಲ್ಲಿ ಯುಜ್ವೇಂದ್ರ ಚಹಲ್ ತಮ್ಮ ಸೂಪರ್ ಸ್ಪೆಲ್ ಮೂಲಕ ಎದುರಾಳಿ ಬ್ಯಾಟ್ಸ್ಮನ್ಸ್ಗಳನ್ನ ಕಟ್ಟಿಹಾಕ್ತಾರೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲೂ ಯುಜ್ವೇಂದ್ರ ಚಹಲ್. ಡ್ಯಾನ್ಸ್ ಮಾಡಿ ಮನರಂಜನೆ ಮಾಡುತ್ತಿರುವ ಈ ಗೂಗ್ಲಿ ಮಾಸ್ಟರ್, ಇದೀಗ ಯುವತಿಯೊಬ್ಬಳೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಿದ್ದಾರೆ.

Related