ಅಂತ ಇಂತೂ ‘ಕೊರೋನಾ’ಗೆ ಸಿಕ್ಕೇ ಬಿಡ್ತು ಮದ್ದು

ಅಂತ ಇಂತೂ ‘ಕೊರೋನಾ’ಗೆ ಸಿಕ್ಕೇ ಬಿಡ್ತು ಮದ್ದು

ಇಂದು ಅಂತೂ ಮಹಾ ಮಾರಿ ಕೊರೋನಾಗೆ ಕೊನೆಗೂ ಮದ್ದು ಸಿಕ್ಕೇ ಬಿಟ್ಟಿದೆ. ಶೇ.95ರಷ್ಟು ಕೊರೋನಾ ಗುಣಪಡಿಸುವಂತ ಫೈಜರ್ ಲಸಿಕೆ ಬಳಕೆಗೆ ಇಂಗ್ಲೆಂಡ್ ಅನುಮತಿ ನೀಡುವ ಮೂಲಕ, ಕೊರೋನಾ ಲಸಿಕೆ ಕಂಡು ಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಕೊರೋನಾಗೆ ಕೊನೆಗೂ ಲಸಿಕೇ ಬಂದೇ ಬಿಡ್ತು ಎನ್ನುವ ನಿಟ್ಟುಸಿರುವ ಬಿಡುವಂತೆ ಆಗಿದೆ.

ಮುಂದಿನ ವಾರದಿಂದ ಫಿಜರ್-ಬಯೋಎನ್ ಟೆಕ್ ಲಸಿಕೆಯನ್ನು ಯುನೈಟೆಡ್ ಕಿಂಗ್ ಡಮ್ ಅನುಮೋದಿಸಿದೆ ಎಂಬುದಾಗಿ ತಿಳಿದು ಬಂದಿದೆ. ಮೊದಲ ದೇಶವಾಗಿ ಮತ್ತು ಕೋವಿಡ್-19 ವಿರುದ್ಧ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶವಾಗಿ ಹೊರಹೊಮ್ಮಿದೆ.

ಫಿಜರ್ ಇಂಕ್ ಮತ್ತು ಬಯೋನ್ ಟೆಕ್ ಮಂಗಳವಾರ, ತಮ್ಮ ಕೋವಿಡ್-19 ಲಸಿಕೆಯನ್ನು ಷರತ್ತುಬದ್ಧ ದೃಢೀಕರಣಕ್ಕಾಗಿ ಯುರೋಪಿಯನ್ ಔಷಧಗಳ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಅಂದಹಾಗೇ ನ.18ರಂದು ಅಂತಿಮ ಪ್ರಯೋಗ ಫಲಿತಾಂಶದಲ್ಲಿ ಯಶಸ್ಸು ಕಂಡಂತ ಯುನೈಟೆಡ್ ಸ್ಟೇಟ್ಸ್ನ ಫೈಜರ್ ಮತ್ತು ಜರ್ಮನಿಯ ಬಯೋಎನ್ ಟೆಕ್, ಫೈಜರ್ ಲಸಿಕೆ, ಕೊರೋನಾ ಸೋಂಕಿತರನ್ನು ಶೇ.95ರಷ್ಟು ಗುಣಪಡಿಸಲಿದೆ ಎಂಬುದಾಗಿ ತಿಳಿದು ಬಂದಿದೆ.

Related