ಈ ಶ್ವಾನ ಕುದುರೆಯಂತಿದೆ.!

ಈ ಶ್ವಾನ ಕುದುರೆಯಂತಿದೆ.!

ಜರ್ಮನಿಯ, ಮಾ. 19 : ತಮ್ಮ ಬೃಹತ್ ಗಾತ್ರದಿಂದಲೇ ಖ್ಯಾತಿ ಪಡೆದ ಶ್ವಾನಗಳೆಂದರೆ ಅವು ಜರ್ಮನಿಯ ಗ್ರೇಟ್ ಡೇನ್ಗಳು. ಅತ್ಯಂತ ಎತ್ತರದ ನಾಯಿ ಎಂಬ ಖ್ಯಾತಿಯಿಂದ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿರುವ ಝಿಯಸ್ ಎಂಬ ಇದೇ ತಳಿಯ ನಾಯಿಯೊಂದು ಪಾದದಿಂದ ತೋಳಿನವರೆಗೂ 44 ಇಂಚುಗಳಷ್ಟು ಎತ್ತರವಿತ್ತು.ಇದೀಗ ಕೆನಡಾದಲ್ಲಿರುವ ಮತ್ತೊಂದು ಗ್ರೇಟ್ ಡೇನ್ ಒಂದು ಆ ನಾಯಿಗಿಂತಲೂ ಎತ್ತರವಿರುವ ಸಾದ್ಯತೆಗಳಿದೆ. ಥಂಡರ್ ಹೆಸರಿನ ಈ ನಾಯಿಯು 95 ಕೆಜಿ ತೂಕವಿದ್ದು, 7 ಅಡಿ ಎತ್ತರವಿದೆ. ಅದರ ಮಾಲಕಿ ಜೆನ್ನಿಗಿಂತಲೂ ಈ ನಾಯಿ 2 ಅಡಿ  ಎತ್ತರವಿದೆ. ಒಂಟಾರಿಯೋದಲ್ಲಿರುವ ಈ ಥಂಡರ್ ತನ್ನ ಇಡೀ ಏರಿಯಾದಲ್ಲೇ ಅತ್ಯಂತ ಫೇಮಸ್ ಪರ್ಸನಾಲಿಟಿ ಆಗಿದ್ದು, ಆತ ವಾಕಿಂಗ್ಗೆಂದು ಹೊರಗಡೆ ಹೋದಾಗೆಲ್ಲಾ ಜನರ ಈತನೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ. ಕೆಲವರು ಈತನನ್ನು ಕುದುರೆ ಎಂದೂ ತಿಳಿದುಕೊಂಡವರಿದ್ದಾರೆ.

Related