‘ಮಹಿಳೆಯರಿಂದಲೇ ಈ ದೇಶದ ಪ್ರಗತಿ’

‘ಮಹಿಳೆಯರಿಂದಲೇ ಈ ದೇಶದ ಪ್ರಗತಿ’

ಶಹಾಪುರ: ಸರ್ವ ಭಾರತೀಯ ಸಂಸ್ಕೃತಿಯ ಮೌಲ್ಯಗಳ ರಕ್ಷಣೆ ನಮ್ಮೇಲ್ಲರ ಜವಬ್ದಾರಿಯಾಗಿದೆ. ಶ್ರಾವಣ ಹಿಂದೂಗಳಿಗೆ ಪರಮ ಪವಿತ್ರ ಮಾಸವಾಗಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು. ನಗರದ ವಾರ್ಡ್ ನಂ ೫ ಕುಂಬಾರಗಿರಿ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಬಿಜೆಪಿ ನಗರ ಮಹಿಳಾ ಮೊರ್ಚಾದ ವತಿಯಿಂದ ಗುರುವಾರ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರನ್ನು ಉದ್ದೇಶಿಸಿ ಮಾತಾನಾಡಿದ ಅವರು ಮಹಿಳೆಯರು ಯಾವುದೇ ಕಾರಣಕ್ಕೂ ಹಿಂಜರಿಯದೇ ಮುಖ್ಯ ವಾಹಿನಿಯಲ್ಲಿ ಪಾಲ್ಗೊಂಡು ಈ ನಾಡಿನ ಅಭಿವೃದ್ಧಿಗೆ ಸಕಾರಾತ್ಮಕ ನಿಲುವು ತಾಳಬೇಕು. ಮಹಿಳೆಯರಿಂದಲೇ ಈ ದೇಶದ ಪ್ರಗತಿ ಮತ್ತು ಶ್ರಾವಣ ಮಾಸದಲ್ಲಿ ಮಾಡುವ ಧರ್ಮ ಕಾರ್ಯಗಳು ಅತ್ಯಂತ ಶ್ರೇಷ್ಠವಾದವು. ಸರ್ವರ ಒಳಿತಿಗೆ ಭಗವಂತನಲ್ಲಿ ಪ್ರಾರ್ಥನೆ ಪೂಜೆ, ಸಂಸ್ಕಾರ, ಪರಿಶುದ್ಧ ,ನಡೆ-ನುಡಿ, ಹಿರಿಯರ ವಾಣಿ ಆಲಿಸುವುದು ಅಗತ್ಯವಾಗಿದೆ. ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಪ್ರತಿಯೊಬ್ಬರೂ ಭಗವಂತನ ಸ್ಮರಣೆ ಪುಣ್ಯದ ಕಾರ್ಯ ಮೈಗೂಡಿಸಿ ಕೊಳ್ಳುವುದರಿಂದ ಕೆಲಸ ಕಾರ್ಯಗಳು ಚೈತನ್ಯವಾಗಿ ಸಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಮಲ್ಲಣ್ಣಗೌಡ ಮಡ್ಡಿ ಸಾಹು, ಅಮೀನರೆಡ್ಡಿ ಯಾಳಗಿ, ಡಾ ಚಂದ್ರಶೇಖರ ಸುಬೇದರ, ಮಲ್ಲಿಕಾರ್ಜುನ್ ಚಿಲ್ಲಾಳ, ಬಸವರಾಜಪ್ಪಗೌಡ ವಿಭೂತಿಹಳ್ಳಿ , ಮಲ್ಲಿಕಾರ್ಜುನ್ ಕಂದಕೂರ, ನಗರ ಮಂಡಲ ಅಧ್ಯಕ್ಷ ದೇವಿಂದ್ರಪ್ಪ ಕೊನೇರಾ, ನಗರ ಮಹಿಳಾ ಮೊರ್ಚಾ ಅಧ್ಯಕ್ಷೇ ಶಿವಲೀಲಾ ಅಕುಲ್, ನಗರಸಭೆ ಸದಸ್ಯರಾದ ನಾಗರತ್ನ ಯಾಳಗಿ, ಜ್ಯೋತಿ ಬಾಸುತ್ಕರ್, ಭಾರತಿ ಜಮಖಂಡಿ, ಮಂಜುಳಾ ಮಾಲಗತ್ತಿ, ಸೂಗಮ್ಮ ಪಾಟೀಲ್, ನಾಗಮ್ಮ ಹಿರೇಮಠ, ಜಯಲಕ್ಷ್ಮಿ ಹೊಸ್ಮನಿ, ಅಂಬಿಕಾ, ಸುಧಾ ಭಂಡಾರಿ, ಸುಜಾತ ಪಾಟೀಲ್, ವೈಶಾಲಿ ಶಿರವಾಳಕರ್, ಸುವರ್ಣ, ರಾಘವೇಂದ್ರ ಯಕ್ಷಿಂತಿ, ಅಂಬ್ರೇಶ್ ನಂದಿಕೋಲ್, ಅಪ್ಪಣ್ಣ ದಶವಂತ, ಅಶೋಕ ನಾಯಕ, ಸಂತೋಷ ಬಾಸುತ್ಕರ್, ಚಂದ್ರಶೇಖರ ಯಾಳಗಿ, ಖಾದರಪಾಷ, ಶಾಂತವೀರ ಪಾಟೀಲ್, ಮಂಜು ಚವ್ಹಾಣ, ಉಮೇಶ ಮಹಾಮನಿ, ವಿರೇಶ್ ಅಡಕಿ, ಅಪ್ಸರ್ ಜಮಖಂಡಿ, ರಾಜು ಪಂಚಬಾವಿ, ವೆಂಕಟೇಶ ಗೌನಳ್ಳಿ, ಸಂಗಣ್ಣ ಕುಂಬಾರ, ಮಂಜು ಅಲಬನೂರ ಸೇರಿದಂತೆ ಇನ್ನಿತರರಿದ್ದರು.

Related