ಚಳಿಗಾಲದ ಅಧಿವೇಶನ ನಡೆಯಲ್ಲ

ಚಳಿಗಾಲದ ಅಧಿವೇಶನ ನಡೆಯಲ್ಲ

ನವದೆಹಲಿ: ಜನವರಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲು ವಿರೋಧಪಕ್ಷ ನಾಯಕರು ಕೂಡ ಒಪ್ಪಿಗೆ ನೀಡಿದ ಕಾರಣ ಈ ಬಾರಿ ಸಂಸತ್ ಚಳಿಗಾಲದ ಅಧಿವೇಶನ ನಡೆಸುವುದಿಲ್ಲ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಲು ಚಳಿಗಾಲದ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಪತ್ರ ಬರೆದಿದ್ದರು. ಅವರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿರುವ ಪ್ರಲ್ಹಾದ್ ಜೋಶಿ ಈ ಬಾರಿ ಸಂಸತ್ ಅಧಿವೇಶನ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಸಂಸತ್ ಆರು ತಿಂಗಳಲ್ಲಿ ಸಭೆ ಸೇರಬೇಕು ಎಂದು ಹೇಳುತ್ತದೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗುವ ಮುಂಚಿತವಾಗಿ ಜನವರಿ ಕೊನೆಯ ವಾರದಲ್ಲಿ ಅಧಿವೇಶನ ನಡೆಯುವ ಸಾಧ್ಯತೆ ಇದೆ.

Related