ಬೆಂಗಳೂರು: ಕರ್ನಾಟಕ ಸರ್ಕಾರದ ವಿರುದ್ಧ ಸಂಸದ ಬಸುರಾಜ್ ಬೊಮ್ಮಾಯಿ ಅವರು ಆಕ್ರೋಶ ಅವರ ಹಾಕಿದ್ದಾರೆ. ಕಾಂಗ್ರೆಸ್ನವರು ಗುಲಾಮರಂತೆ ವರ್ತಿಸುವುದನ್ನು ಬಿಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು, ಕಾಂಗ್ರೆಸ್ನಲ್ಲಿ ಸತ್ಯಕ್ಕೆ ಸ್ಥಳವಿಲ್ಲ. ಸತ್ಯ ಹೇಳುವವರಿಗೂ ಸ್ಥಳವಿಲ್ಲ. ಕಾಂಗ್ರೆಸ್ನ ಮತಕ್ಕೆ ಓಲೈಕೆ ರಾಜಕಾರಣದ ಜೊತೆಗೆ ಆಂತರಿಕವಾಗಿ ಸಂವಿಧಾನದ ವಿರೋಧ ನಡೆದರೂ ಹೈಕಮಾಂಡ್ ವಿರುದ್ದ ಧ್ವನಿ ಎತ್ತುವ ಸ್ವತಂತ್ರ ಇಲ್ಲ. ಗುಲಾಮರಂತೆ ನಡೆಸಿಕೊಳ್ಳುವ ಮನಸ್ಥಿತಿ ಮೂರನೇ ತಲೆಮಾರಿನ ಕಾಂಗ್ರೆಸ್ ನಾಯಕರಿಗೆ ಇನ್ನೂ ಹೋಗಿಲ್ಲ ಎಂದರು. ಇದನ್ನೂ ಓದಿ: ಅಧಿವೇಶನದಲ್ಲಿ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಶಾಸಕ ಸತೀಶ್ ರೆಡ್ಡಿ
ಕೆ.ಎನ್.ರಾಜಣ್ಣ ಒಬ್ಬ ಹಿರಿಯ ಅನುಭವಿ ರಾಜಕಾರಣಿ. ತಮ್ಮ ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದರು. ಎಸ್ಟಿ ಸಮುದಾಯದ ಹಿರಿಯ ನಾಯಕರಾಗಿರುವ ಅವರಿಗೆ ರಾಜೀನಾಮೆ ಕೊಡಲು ಅವಕಾಶ ಕೊಡದಿರುವುದು ಅವರ ಅನುಭವ, ದಕ್ಷತೆ, ಎಸ್ಟಿ ಜನಾಂಗಕ್ಕೆ ಮಾಡಿರುವ ಅವಮಾನ ಎಂದು ಬರೆದು ಕೊಂಡಿದ್ದಾರೆ.
