Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅಧಿವೇಶನದಲ್ಲಿ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಶಾಸಕ ಸತೀಶ್ ರೆಡ್ಡಿ
  • Bangalore
  • Politics
  • State

ಅಧಿವೇಶನದಲ್ಲಿ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಶಾಸಕ ಸತೀಶ್ ರೆಡ್ಡಿ

admin August 11, 2025 1 minute read
WhatsApp Image 2025-08-11 at 19.20.52
Spread the love

ಬೆಂಗಳೂರು: ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಮ್ ಸತೀಶ್ ರೆಡ್ಡಿ ಅವರು ಇಂದು ನಡೆದ ಅಧಿವೇಶನದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬರುವಂತಹ ಸರ್ವೇ ನಂಬರ್43 ಮತ್ತು 44 ಹೊಂಗಸಂದ್ರ ಈ ಭಾಗದಲ್ಲಿ ಸರ್ಕಾರಿ ಜಮೀನು ಸುಮಾರು 40 ಎಕರೆಗಿಂತ ಹೆಚ್ಚಿದ್ದು, ಈ ಜಾಗದಲ್ಲಿ ಅನೇಕರು ಬೇರೆ ಬೇರೆಯವರು ತಮಗೆ ಮಂಜೂರಾಗಿರುವ ಜಾಗವನ್ನು ಮಾರಾಟ ಮಾಡಿಕೊಂಡು ಪಿಪಿಸಿಎಲ್ ನಲ್ಲಿ ಅದರ ವಿರುದ್ಧ ಕೇಸ್ ಗಳನ್ನು ಹಾಕಿಕೊಂಡು ಮತ್ತೆ ಆ ಜಾಗವನ್ನು ಎರಡೆರಡು ಬಾರಿ, ಮೂರು ಬಾರಿ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ಈಗಾಗಲೇ ನಾನು ಕಂದಾಯ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

ಹೊಂಗಸಂದ್ರ ಗ್ರಾಮ, ಬೆಂಗಳೂರು ದಕ್ಷಿಣ ತಾಲ್ಲೂಕು, ಸರ್ವೇ ನಂ. 43, ರೀ.ಸರ್ವೇ ನಂ. 123 ರಲ್ಲಿ ಸರ್ಕಾರಿ ಜಮೀನನ್ನು ಕಾನೂನು ಬಾಹೀರವಾಗಿ ನಕಲಿ ದಾಖಲೆಗಳನ್ನು ಅತಿಕ್ರಮಣ ಮಾಡಿ ಮಾರಾಟ ಮಾಡುತ್ತಿದ್ದಾರೆ

ಹೊಂಗಸಂದ್ರ ಗ್ರಾಮ, ಬೆಂಗಳೂರು ದಕ್ಷಿಣ ತಾಲ್ಲೂಕು ಸರ್ವೇ ನಂ. 43, ರೀ.ಸರ್ವೇ ನಂ. 123 ರಲ್ಲಿ ಎರಡು ಎಕರೆ ಜಮೀನು ಇದ್ದು 1939 ಮತ್ತು 1940 ರಲ್ಲಿ ಮುನಿವೆಂಕಟಪ್ಪ ರವರಿಗೆ ಮಂಜೂರಾಗಿರುತ್ತದೆ. ಇವರು 1949 ರಲ್ಲಿ ಚೆನ್ನಮ್ಮರವರಿಗೆ ಮಾರಾಟ ಮಾಡಿರುತ್ತಾರೆ. ಚೆನ್ನಮ್ಮರವರು 1951 ರಲ್ಲಿ ಅಬ್ಬಯ್ಯ ರವರಿಗೆ ಮಾರಾಟ ಮಾಡಿರುತ್ತಾರೆ ಮತ್ತೆ ಅಬ್ಬಯ್ಯರವರು 1962 ಮುನಿವೆಂಕಟಪ್ಪ ರವರ ಪತ್ನಿಯಾದ ಮುನಿವೆಂಕಟಮ್ಮರವರಿಗೆ ಮಾರಾಟ ಮಾಡುತ್ತಾರೆ. 1963 ರಲ್ಲಿ ಮುನಿವೆಂಕಟಮ್ಮ ಇವರ ಮಗನಾದ ಯಲ್ಲಪ್ಪ ರವರಿಗೆ ಬಂದಿರುತ್ತದೆ.

ಯಲ್ಲಪ್ಪ ರವರು 1963 ರಲ್ಲಿ ಶೇಖ್ ಮೊಹಮ್ಮದ್ ಸಾಬ್ ರವರಿಗೆ ಮಾರಿರುತ್ತಾರೆ. ಶೇಖ್ ಮೊಹಮ್ಮದ್ ರವರು ಸೇಲ್ ಪರ್ಮಿಷನ್ ತೆಗೆದುಕೊಂಡು 1973 ರಲ್ಲಿ ಮುನ್ನಾ ಸಾಬ್ ರವರಿಗೆ ಮಾರಾಟ ಮಾಡಿರುತ್ತಾರೆ. ಮುನ್ನಾಸಾಬ್ ರವರು 1974 ರಲ್ಲಿ ಮಾನಸದೇವಿ ರವರಿಗೆ ಮಾರಾಟ ಮಾಡಿರುತ್ತಾರೆ. ಮಾನಸದೇವಿ ರವರು 1993 ರಲ್ಲಿ ಗೋಪಾಲ್ ರವರಿಗೆ ಮಾರಾಟ ಮಾಡಿರುತ್ತಾರೆ. ಗೋಪಾಲ್ ರವರು ಲೇಔಟ್ ಮಾಡಿ ಸುಮಾರು 45 ಸೈಟ್‌ಗಳನ್ನು ಕೋಕಿಲ ತನಿಘವೇಲು, ಮತ್ತು ವೆಂಕಟರಮಣಪ್ಪ, ಎಗ್‌ಬರ್ಟ್‌ ದೇವದತ್ತ, ರಮೇಶ್ ಬಾಬು, ಶೈಲಜ, ಸುನಂದ, ಜಯಶ್ರೀ, ಶೋಭಾ ಹೀಗೆ ಸುಮಾರು 45 ಜನರಿಗೆ ಮಾರಾಟ ಮಾಡಿರುತ್ತಾರೆ. ಸದರಿ ಸೈಟ್‌ಗಳನ್ನು ಕೊಂಡುಕೊಂಡವರು ಇವುಗಳಲ್ಲಿ ಮನೆಗಳನ್ನು ಸುಮಾರು 30 ವರ್ಷಗಳಿಂದ ಕಟ್ಟಿಕೊಂಡು ವಾಸವಾಗಿರುತ್ತಾರೆ. ಇದನ್ನೂ ಓದಿ: ಪ್ರಧಾನಿಗೆ ಸ್ವಾಗತ ಕೋರಿದ ಶಾಸಕ ಸತೀಶ್ ರೆಡ್ಡಿ

ಮುಂದುವರೆದು, ಯಲ್ಲಪ್ಪ ಮತ್ತು ಅವರ ಕುಟುಂಬದವರು 2009 ರಲ್ಲಿ ಉಪ ವಿಭಾಗಧಿಕಾರಿ ಇವರಲ್ಲಿ ಕೆಎಸ್‌ಸಿಎಸ್‌ಟಿ (ಎಸ್) 3/10-11 ಪಿಟಿಸಿಎಲ್ ದಾವೆಯನ್ನು ಹೂಡುತ್ತಾರೆ. ಉಪ ವಿಭಾಗಧಿಕಾರಿಯು ಕೇಸ್ ಅನ್ನು ಇವರ ಪರವಾಗಿ ಮಾಡಿ ಎಲ್ಲಾ ವಹಿವಾಟುಗಳನ್ನು ರದ್ದುಪಡಿಸಿ ದಿನಾಂಕ: 13.06.2011 ಮಂಜೂರುದಾರರ ವಾರಸುದಾರರಿಗೆ ಪುನರ್‌ಸ್ಥಾಪಿಸಲು ಆದೇಶಿಸಿರುತ್ತಾರೆ. ಇದರ ಬಗ್ಗೆ ಈಗಾಗಲೇ ನಾನು ಕಂದಾಯ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

ಸರ್ಕಾರದ ಜಾಗವನ್ನು ಅಧಿಕಾರಿಗಳ ಜೊತೆ ಶಾಮೀಲಾಗಿ ಎರಡುವರೆ ಎಕರೆಗೆ ಮತ್ತೆ ಹೊಸದಾಗಿ ಪಾಣಿ ಮತ್ತು ಮೋಟೇಶನ್ನು, ಸರ್ವೇ ನಂಬರ್ ಗಳನ್ನು ಮಾಡಿಕೊಂಡು ಮತ್ತೆ ಅಕ್ರಮಯ ಎಸಿಗುತ್ತಿದ್ದಾರೆ.

ಎಷ್ಟೇ ಆಡರ್ ಆದರೂ ಕೂಡ ಆ ಜಾಗ ನಮಗೆ ಸೇರಿದ್ದು ಎಂದು ಮತ್ತೆ ಅವರು ಕಾಂಪೌಂಡ್ ಹಾಕಿಕೊಂಡು ಎಂದು ಹೇಳುತ್ತಿದ್ದಾರೆ. ನಾವು ಅವರು ಹಾಕಿಕೊಂಡಿರುವ ಕಾಂಪೌಂಡ್ಗಳನ್ನು ಓಡೆದು ಹಾಕಿ ತಡೆಯಾಜ್ಞೆಯನ್ನು ನೀಡಿದರು ಕೂಡ ಅವರು ಇತ್ತೀಚಿಗೆ ರಾತ್ರೋರಾತ್ರಿ ಸ್ಮಶಾನದ ಜಾಗವನ್ನು ಬಿಡದೆ, ಸ್ಮಶಾನವನ್ನು ಹೊಡೆದಾಕಿ ಮತ್ತೆ ಆ ಜಾಗ ನಮ್ಮದು ಎಂದು ಖ್ಯಾತಿ ತೆಗೆಯುತ್ತಿದ್ದಾರೆ ಎಂದರು. ಅಧಿಕಾರಿಗಳ ಜೊತೆ ಸೇರಿ ಇವರು ಅಕ್ರಮಯ ಎಸಗುತ್ತಿದ್ದಾರೆ ಎಂದು ಅಧಿವೇಶನದಲ್ಲಿ ಮಂಡಿಸಿದರು.

About the Author

admin

Administrator

Visit Website View All Posts

Spread the love

Post navigation

Previous: ಪ್ರಧಾನಿಗೆ ಸ್ವಾಗತ ಕೋರಿದ ಶಾಸಕ ಸತೀಶ್ ರೆಡ್ಡಿ
Next: ಕಾಂಗ್ರೆಸ್‌ನಲ್ಲಿ ಸತ್ಯಕ್ಕೆ ಸ್ಥಳವಿಲ್ಲ: ಬೊಮ್ಮಾಯಿ

Views:

16

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.