ಎಳನೀರಲ್ಲಡಗಿದೆ ಆರೋಗ್ಯ

ಎಳನೀರಲ್ಲಡಗಿದೆ ಆರೋಗ್ಯ

ವೈದ್ಯರ ಹೇಳುವ ಪ್ರಕಾರ ಎಳನೀರು ಎಲ್ಲ ರೋಗಕ್ಕೂ ರಾಮಬಾಣ ಎಂದು ಈಗಾಗಲೇ ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಹಲವಾರು ರೀತಿಯ ರೋಗಗಳನ್ನು ನಾವು ನೋಡಿರುತ್ತೇವೆ. ಈ ಎಲ್ಲ ರೋಗಗಳಿಗೂ ಎಳನೀರು ಒಂದೊಳ್ಳೆ ಔಷಧಿ ಎಂದು ವೈದ್ಯರು ತಿಳಿಸುತ್ತಾರೆ.

ಪ್ರತಿನಿತ್ಯ ನಾವು ಬೆಳಿಗ್ಗೆ ಎದ್ದ ಕೂಡಲೇ ಒಂದು ಎಳನೀರನ್ನು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿರುವ ಸಮಸ್ಯೆಗಳು ಅಂದರೆ, ಹೊಟ್ಟೆ ನೋವು ತಲೆ, ನೋವು, ಸುಸ್ತು ಇನ್ನಿತರ ರೋಗಗಳಿಗೆ ಇದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.

ಎಳನೀರಿನಲ್ಲಿರುವ ವಿವಿಧ ಖನಿಜ, ಸಕ್ಕರೆ ಹಾಗೂ ಲವಣಾಂಶ ಅಗತ್ಯ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಪಾನವಾಗಿದೆ. ಬೇಸಿಗೆ ತಾಪವನ್ನು ನೇರವಾಗಿ ನೀಗಿಸಬಲ್ಲ ಎಳನೀರು ದೈವದತ್ತವಾದುದು.

ನಿಶಕ್ತಿಯನ್ನು ನೀಗಿಸಲು ಪ್ರತಿನಿತ್ಯ ಬೆಳಿಗ್ಗೆ ಎದ್ದು ಕೂಡಲೇ ಎಳನೀರು ಸೇವಿಸಿದರೆ ನಮ್ಮ ದೇಹಕ್ಕೆ ಶಕ್ತಿ ಒದಗುತ್ತದೆ

ಅಜೀರ್ಣ ಮತ್ತು ಹೊಟ್ಟೆನೋವು ಸಂಬಂದಿತ ಸಮಸ್ಯೆಗಳಿಗೆ ಎಳನೀರು ಒಳ್ಳೆಯ ಆರೋಗ್ಯ ಪರಿಣಾಮ ನೀಡುತ್ತದೆ.

ಎಳನೀರು ಕೇವಲ ಆರೋಗ್ಯ ಪ್ರಯೋಜನೆಗಳನ್ನು ಮಾತ್ರ ಹೊಂದಿಲ್ಲ, ಇದು ಚರ್ಮಕ್ಕೂ ಅಷ್ಟೇ ಉತ್ತಮ ಪರಿಹಾರಗಳನ್ನು ನೀಡುತ್ತದೆ, ಸುಕ್ಕುಗಟ್ಟಿದ ಚರ್ಮವನ್ನು ಎಳನೀರಿನಿಂದ ತೊಳೆದರೆ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.

ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಮಧುಮೇಹ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರ ಪರಿಣಾಮ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ.

ಮುಖದ ಮೇಲೆ ಹೊಳಪನ್ನು ಕಾಪಾಡಿಕೊಳ್ಳಲು ಎಳನೀರು ಸಹಾಯ ಮಾಡುತ್ತದೆ. ನಿರ್ಜಲೀಕರಣವು ಚರ್ಮವನ್ನು ಹಾನಿಯುಂಟು ಮಾಡುತ್ತದೆ. ಜೊತೆಗೆ ನಿಮ್ಮ ಮುಖದಲ್ಲಿ ಮೊಡವೆ ಉಂಟಾಗಲು ಕಾರಣವಾಗುತ್ತದೆ. ಎಳನೀರು ದೇಹಕ್ಕೆ ತೇವಾಂಶವನ್ನು ನೀಡುವುದರಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅದು ಕಣ್ಣು ಉರಿ ಕಣ್ಣೂರಿಗೆ ಏಳು ನೀರು ಒಂದು ದಿವ್ಯ ಔಷಧಿ. ಪ್ರತಿನಿತ್ಯ ಹೇಳಿದೆ ಎಳನೀರನ್ನು ಸೇವಿಸುವುದರಿಂದ ಕಣ್ಣ ಉರಿ ಕಡಿಮೆಯಾಗುತ್ತದೆ.

ವಾಂತಿ ಭೇಟಿಯಾದ ಸಮಯದಲ್ಲಿ ಎಳನೀರನ್ನು ಸೇವಿಸಿದರೆ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ ಮತ್ತು ವಾಂತಿ ಭೇದಿಯನ್ನು ತಡೆಯಲು ಸಹಾಯವಾಗುತ್ತದೆ. ಸಕ್ಕರೆ ಕಾಯಿಲೆ ಇರುವವರು ಪ್ರತಿನಿತ್ಯ ಎಳನೀರನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು.

Related