ರಂಗಕಲಾವಿದ ಕೋಗಳಿ ಪಂಪಣ್ಣ ಇನ್ನಿಲ್ಲ!

ರಂಗಕಲಾವಿದ ಕೋಗಳಿ ಪಂಪಣ್ಣ ಇನ್ನಿಲ್ಲ!

ಹಗರಿಬೊಮ್ಮನಹಳ್ಳಿ : ಕನ್ನಡ ರಂಗಭೂಮಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಕ ಆಕಾಡೆಮಿ ಪುರಸ್ಕೃತ ನಾಡಿನ ಹೆಸರಾಂತ ರಂಗ ಕಲಾವಿದ, ಸಾಹಿತಿ ನಿರ್ದೆಶಕ, ರಂಗಭೂಮಿಯ ಹಿರಿಯ ಕಲಾವಿದರಾದ ಕೋಗಳಿ ಪಂಪಣ್ಣನವರು ಗುರುವಾರ ಬೆಳ್ಳಿಗೆ ನಿಧನರಾಗಿದ್ದಾರೆ.

ಪಂಪಣ್ಣ ಅವರಿಗೆ 76 ವರ್ಷ ವಯಸಾಗಿತ್ತು .ಪತ್ನಿ, ಇಬ್ಬರು ಪುತ್ರರು,ಇಬ್ಬರು ಪುತ್ರಿಯರು ಸಹೋದರರು ಸಹೋದರಿಯರು ಅಪಾರ ಬಂದು ಬಳಗವನ್ನು ಅಸಂಖ್ಯಾತ ರಂಗ ಕಲಾಭಿಮಾನಿಗಳನ್ನು ಆಗಲಿದ್ದಾರೆ. ಕಲಾದೇವಿಯ ಆರಾಧಕರಾದ ಕೋಗಳಿ ಪಂಪಣ್ಣನವರು ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿಯ ನಂಟನ್ನು ಬೆಳೆಸಿಕೊಂಡಿದ್ದ ಅವರು ಸಾಮಾಜಿಕ ನಾಟಕ ಹಾಗೂ ಪೌರಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ ಇವರು ಸ.ಸು 60 ವರ್ಷಗಳ ಕಾಲ ರಂಗ ಕಲಾವಿದರಾಗಿ ಕಲಾ ಸೇವೆ ಮಾಡಿದ್ದಾರೆ.

ನಾಡಿನ ಉದ್ದಗಲಕ್ಕೂ ತಮ್ಮದೇ ಆದ ಕಲಾಭಿಮಾನಿಗಳನ್ನು ಹೊಂದಿದ್ದ ಪಂಪಣ್ಣ ಅವರು ಕೋಗಳಿ ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿ ಸರಳ ಸಜ್ಜನೀಕೆಯ ಆದರ್ಶವಾದ ಬದುಕು ನೆಡೆಸಿದವರು. ಕಲಾವಿದ ಕೋಗಳಿ ಪಂಪಣ್ಣ ನಿಧನರಾಗಿದ್ದಾರೆ ಗುರುವಾರ ಸಂಜೆ ಸ್ವ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

Related