ರಾಕಿ ಬಾಯ್ ನ 19ನೇ ಚಿತ್ರದ ಟೈಟಲ್ ರಿವಿಲ್

ರಾಕಿ ಬಾಯ್ ನ 19ನೇ ಚಿತ್ರದ ಟೈಟಲ್ ರಿವಿಲ್

ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗು ನೋಡುವ ಹಾಗೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಯಸ್… ಕೆಜಿಎಫ್ ನ ನಂತರ ನಟ ಯಶ್ ಸುಮಾರು ಒಂದೂವರೆ ವರ್ಷಗಳ ನಂತರ ಅವರ 19ನೇ ಚಿತ್ರಕ್ಕೆ ಟೈಟಲ್ ಇಂದು ರಿಲೀಸ್ ಮಾಡಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ರಾಕಿ ಬಾಯ್ ನಟನೆಯ ‘ KGF2’ ಸಿನಿಮಾ 2022ರ ಏಪ್ರಿಲ್​ನಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ರಾಕಿ ಬಾಯ್ ನ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ‘ಕೆಜಿಎಫ್ 2’ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಯಶ್ ಹೊಸ ಚಿತ್ರದ ಟೈಟಲ್ ಘೋಷಣೆ ಆಗಿದೆ.

ಯಶ್ ಅವರ ಹೊಸ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘Yash 19’ಗಾಗಿ ಫ್ಯಾನ್ಸ್ ಕಾಯುತ್ತಲೇ ಇದ್ದರು. ಕೊನೆಗೂ ಈ ವಿಚಾರ ರಿವೀಲ್ ಆಗಿದೆ. ‘Yash 19’ ಚಿತ್ರಕ್ಕೆ ‘ಟಾಕ್ಸಿಕ್’ (Toxic) ಎಂದು ಟೈಟಲ್ ಇಡಲಾಗಿದೆ. ಈ ಟೈಟಲ್ ನೊಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕಾರಣಕ್ಕೆ ಈ ಚಿತ್ರಕ್ಕೆ ಟೈಟಲ್ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ.

Related