ಎಸ್ಸೆಸ್ಸೆಲ್ಸಿ ಅಕ್ಷತಾಳಿಗೆ ಮೂರನೇ ರ‍್ಯಾಂಕ್

ಎಸ್ಸೆಸ್ಸೆಲ್ಸಿ ಅಕ್ಷತಾಳಿಗೆ ಮೂರನೇ ರ‍್ಯಾಂಕ್

ಸಿಂದಗಿ  :  ತಾಲ್ಲೂಕಿನಲ್ಲಿ  ಸರ್ ನನಗೆ ನನ್ನ ಓದಿನ ಬಗ್ಗೆ ಹೆಚ್ಚು ನಂಬಿಕೆ, ಶಿಕ್ಷಕರು ಹೇಳಿದ ಪಾಠ ಆಲಿಸಿ, ಕೊಟ್ಟ ಮನೆಗೆಲಸ ಪೂರೈಸಿ, ಓದಲು ಕುಳಿತರೆ ತಡರಾತ್ರಿಯ ಪರಿವೂ ಇರ್ತಿರಲಿಲ್ಲ. ನನ್ನ ಓದಿನ ಬಹಪಾಲಿನಲ್ಲಿ ನಮ್ಮ ಪಾಲಕರ ಸಹಕಾರವಿತ್ತು. ಪರೀಕ್ಷೆ ಎಂದರೆ ಹೇಗೆ ಬರೆಯಬೇಕು. ಅಂಕಗಳನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎನ್ನುವ ಮಾದರಿ ಅರಿತಿದ್ದೆ ಹೀಗಾಗಿ ಪರೀಕ್ಷೆ ಸುಲಲಿತವಾಗಿ ಎದುರಿಸಿದ್ದೆ.

ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಗುರಿ, ಛಲ ಮೂಡಿಸಿಕೊಂಡಿದ್ದು ಈ ಸಾಧನೆ ಮಾಡಿಕೊಳ್ಳಲು ಸಾಧ್ಯವಾಯಿತು. ಹೀಗೆ ತನ್ನ ಓದಿನ ಮೇಲಿದ್ದ ಆಸಕ್ತಿಯನ್ನು ನಂಬಿ ಪರೀಕ್ಷೆ ಎದುರಿಸಿದ್ದ ಸಿಂದಗಿ ಪಟ್ಟಣದ ಆದರ್ಶ ವಿದ್ಯಾಲಯದ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಅಕ್ಷತಾ ಶಶಿಕಾಂತ ರಾಠೋಡ ಇದೀಗ 625 ಅಂಕಗಳಿಗೆ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಗಿಟ್ಟಿಸಿ ತನಗೂ ತನ್ನ ಮನೆಯವರಿಗೂ ಓದಿದ ಶಾಲೆಗೂ, ಶಿಕ್ಷಕ ವೃಂದಕ್ಕೂ ಸಾಧನೆಯ ಮೇರು ಕಿರೀಟ ತೊಡಿಸಿದ್ದಾಳೆ.

ಇಂಗ್ಲಿಷ(125), ಕನ್ನಡ(100), ಹಿಂದಿ(100), ವಿಜ್ಞಾನ(100), ಸಮಾಜ ವಿಜ್ಞಾನ(100), ಗಣಿತ(98) ಅಂಕ ಪಡೆದಿದ್ದಾಳೆ. ಪ್ರತಿ ವಿಷಯದಲ್ಲೂ ನೂರಕ್ಕೆ ನೂರು ಅಂಕ ಪಡೆದಿರುವ ಅಕ್ಷತಾ ಗಣಿತ ವಿಷಯದಲ್ಲಿ ನೂರಕ್ಕೆ 2 ಅಂಕಗಳನ್ನು ಕಡಿಮೆ ಪಡೆದಿದ್ದು, ಪ್ರಥಮ ರ‍್ಯಾಂಕ್ ನಿಂದ  ವಂಚಿತಳಾಗಿದ್ದರೂ, ತನ್ನ ವಿಷಯವಾರು ಶಿಕ್ಷಕ ಬಳಗ ತನ್ನೆಲ್ಲ ಪ್ರಶ್ನೆ ಮತ್ತು ಉತ್ತರಿಸುವ ಬಗೆಯಲ್ಲಿನ ಗೊಂದಲಗಳನ್ನು ದೂರ ಮಾಡಿಕೊಳ್ಳುವ ಮೂಲಕ ರಾಜ್ಯದ  ರ‍್ಯಾಂಕ್ ಗಳನ್ನು ಸಾಲಿನಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು  ತನ್ನ ಸಂತಸ ಹಂಚಿಕೊಂಡಿದ್ದಾಳೆ.

 

Related