ಕೇತುಗ್ರಹ ಸೂರ್ಯಗ್ರಹಣದ ವಿಶೇಷತೆ ಮತ್ತು ಪರಿಣಾಮಗಳು

ಕೇತುಗ್ರಹ ಸೂರ್ಯಗ್ರಹಣದ ವಿಶೇಷತೆ ಮತ್ತು ಪರಿಣಾಮಗಳು

ಖ್ಯಾತ ಜ್ಯೋತಿಷಿ, ವಾಸ್ತು ತಜ್ಞ, ಶ್ರೀಮಾನಸ ದೇವಿ ಆರಾಧಕರಾದ ಜೆ.ಇ. ಶಂಭುಲಿಂಗಪ್ಪರವರು ಇದೇ ಪ್ಲವನಾಮ ಸಂವತ್ಸರ ಮಾರ್ಗಶಿರ ಕಾರ್ತಿಕ ಮಾಸ, ಕೃಷ್ಣಪಕ್ಷ “ಅಮಾವಾಸ್ಯೆ” ದಿನಾಂಕ-04-12-2021ರ ಬೆಳಗ್ಗೆ ಸಮಯ-10-59ಕ್ಕೆ (ಶನಿವಾರ) ನಡೆಯಲಿರುವ “ಕೇತುಗ್ರಸ್ತ ಸೂರ್ಯಗ್ರಹಣ” ವಿಶೇಷತೆ ಮತ್ತು ಪರಿಣಾಮಗಳನ್ನು ಈ ರೀತಿ ತಿಳಿಸಿದ್ದಾರೆ.

ಮುಖ್ಯವಾಗಿ ಈ ಕೇತುಗ್ರಸ್ತ ಸೂರ್ಯ ಗ್ರಹಣದ ಸ್ಪರ್ಶದ ಸಮಯವು 10-59 ಬೆಳಗ್ಗೆ ಹಾಗೂ ಗ್ರಹಣ ಬಿಡುವ ಸಮಯ: 3-07 ಮಧ್ಯಾಹ್ನವಾಗಿರುತ್ತದೆ. ಈ ಸೂರ್ಯ ಗ್ರಹಣವು ಈ ವರ್ಷದಲ್ಲಿ ನಡೆಯುವ ಕೊನೆಯ ಗ್ರಹಣವಾಗಿದ್ದು ಭಾರತ ದೇಶಕ್ಕೆ ಗೋಚರ ಇಲ್ಲದ ಕಾರಣ ಗ್ರಹಣಾಚರಣೆ ಇಲ್ಲ, ಆದರೂ ಗ್ರಹಣದ ಪ್ರಭಾವ ಪ್ರತಿ ಶತ ಶೇಕಡ 75% ಭಾಗ ಎಲ್ಲಾ ಜೀವಿಗಳ ಮೇಲೆಯೂ, ಪ್ರಕೃತಿಯ ಮೇಲೆಯೂ ವ್ಯತಿರಿಕ್ತ ಪ್ರಭಾವ ಬೀರುತ್ತದೆ.

ಜ್ಯೋತಿಷ್ಯದ ರೀತಿಯಲ್ಲಿ ಗ್ರಹಣವು ಎಲ್ಲಾ ರಾಶಿ ಮತ್ತು ಲಗ್ನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಗ್ರಹಣ ಸ್ಪರ್ಶಕಾಲದ ಲಗ್ನ ಕುಂಡಲಿಯನ್ನು ನೋಡುವಾಗ ಮಕರ ಲಗ್ನ ಮತ್ತು ಕೀಟಗಳ ಹಾಗೂ ವಿಷಕಾರಿ ರಾಶಿಯಾದ ವೃಶ್ಚಿಕ ರಾಶಿಯಲ್ಲಿ ಗ್ರಹಣ ಸಂಭವಿಸುತ್ತದೆ.

ಗ್ರಹಣ ಕಾಲಕ್ಕೆ ಲಗ್ನದಲ್ಲಿ ಲಗ್ನಾದಿಪತಿ ಶನಿ ಮಹಾತ್ಮನು ತನ್ನ ಸ್ವಸ್ಥ್ಥಾನದಲ್ಲಿದ್ದು, ರಾಶಿಯಲ್ಲಿ ಸೂರ್ಯ, ಚಂದ್ರ, ಕೇತು ಮತ್ತು ಬುಧ, ಗ್ರಹವು ಒಟ್ಟಿಗೆ ಇದ್ದು ಇದರ ಪ್ರಭಾವ ಈ ರೀತಿಯಲ್ಲಿರುತ್ತದೆ. ಲಗ್ನದಲ್ಲೆ ಲಗ್ನಾದಿಪತಿ ಇರುವುದರಿಂದ ಕೇಂದ್ರ ಸರ್ಕಾರವು ಪ್ರಜೆಗಳಿಗೆ ಉಪಯೋಗ ಆಗುವ ಕೆಲವು ಹೊಸರೀತಿಯ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿ ಗೋಳಿಸುವುದು. ಈಗ ಇರುವ ಕಾನೂನು ಸುವ್ಯವಸ್ಥೆತೆಯನ್ನು ಬಲಪಡಿಸುವುದು ಆಗುತ್ತದೆ.

ಇನ್ನು ಕೀಟ ರಾಶಿಯಾದ ವೃಶ್ಚಿಕದಲ್ಲಿ ಗ್ರಹಣ ಸಂಭವಿಸುವುದರ ಪರಿಣಾಮ ಇಲ್ಲಿ ನಾಲ್ಕು ಗ್ರಹಗಳು ಒಕ್ಕೂಟವು ಮುಖ್ಯವಾಗಿ ಈಗಾಗಲೆ ಕಂಡು ಬಂದಿರುವ ಡ್ರಗ್ಸ್ ಮಾಫಿಯಾ ಇನ್ನೂ ಹೆಚ್ಚಿನ ರೀತಿಯಲ್ಲಿ ಉಲ್ಬಣಗೊಂಡು ಅನೇಕರು ಜೈಲು ಸೇರುವ ಸಾಧ್ಯತೆ ಇದೆ. ರಾಜ್ಯ ಅಂತರಾಜ್ಯ ಮತ್ತು ರಾಷ್ಟಿçÃಯ ಹಿರಿಯ ಅನೇಕ ರಂಗಗಳಲ್ಲಿನ ಮುಖ್ಯವಾಗಿ ಸಿನಿಮಾ ರಂಗದ ಕಲಾವಿದರಿಗೆ ಶುಭಕರವಾಗಿಲ್ಲ.

ಇನ್ನು ರಾಜ್ಯದ ರಾಜಕಾರಣದಲ್ಲಿ ತಲ್ಲಣ ಏರ್ಪಟ್ಟು ಮುಖ್ಯಮಂತ್ರಿಗಳ ಬದಲಾವಣೆ ಸಾಧ್ಯತೆ ತಳ್ಳಿ ಹಾಕುವಂತೆ ಇಲ್ಲ. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ರಾಜಕಾರಿಣಿಗಳಿಗೆ ಅವರವರ ಕರ್ಮಾನುಸಾರ ಜೈಲಿಗೆ ಹೋಗುವ ಸಾಧ್ಯತೆಗಳು ಇದೆ. ರಾಜಕಾರಿಣಿಗಳಲ್ಲಿ ನನ್ನ ವಿಶೇಷ ಮನವಿಯೇನೆಂದರೆ, ಎಲ್ಲಾ ಜಾತಿ ಧರ್ಮದವರು, ಕನ್ನಡಿಗರು ತಾಯಿ ಭುವನೇಶ್ವರಿಯ ಮಕ್ಕಳು. ಇಲ್ಲಿ ಧರ್ಮದಿಂದ ಧರ್ಮಕ್ಕೆ ಜಾತಿಯಿಂದ ಜಾತಿಗೆ, ಮತಕ್ಕೋಸ್ಕರ ಕಿಚ್ಚು ಹಚ್ಚುವ ಕೆಲಸ ದಯವಿಟ್ಟು ಮಾಡಬಾರದೆಂದು ಜ್ಯೋತಿಷಿಗಳು ಮನವಿ ಮಾಡಿದ್ದಾರೆ.

ಇನ್ನು ಈ ಗ್ರಹಣವು ಪ್ರಕೃತಿಯ ಮೇಲೆ ಬಹಳ ಋಣಾತ್ಮಕ ಪರಿಣಾಮವು ಪ್ರಕರಣವಾಗಿ ಬೀರುವುದರಿಂದ ಇನ್ನು ಹೆಚ್ಚು ಮಳೆಗಳು, ಪ್ರಕೃತಿ ವಿಕೋಪಗಳು ಹೆಚ್ಚಾಗಿ ಕೀಟರಾಶಿಯ ಪ್ರಭಾವ ಹೊಸ ಹೊಸ ಸಾಂಕ್ರಮಿಕ ರೋಗಗಳು ಬಂದು ನಿಯಂತ್ರಣಕ್ಕೆ ಬಾರದೆ ಪ್ರಾಣ ನಷ್ಟಗಳನ್ನು ಭಾರತ ದೇಶ ಎದುರಿಸುವ ಸಾಧ್ಯತೆ ಹೆಚ್ಚಿದೆ. ಕಡೆಯದಾಗಿ ದಿನಾಂಕ: 04-12-2021 ರಿಂದ ದೇಶಕ್ಕೆ ಸಂಪೂರ್ಣವಾದ ಕಾಳಸರ್ಪ ದೋಷವು ಕಾಲಿಡಲಿದ್ದು, ದಿನಾಂಕ: 25-04-2022 ರವರೆಗೂ ಈ ಕೆಳಕಂಡ ಕುಂಡಲಿಯಂತೆ ಕಾಡುತ್ತಾ ದಿನಾಂಕ: 11.07.2023 ರ ನಂತರ ದೇಶವು ಎಲ್ಲಾ ಕಂಟಕಗಳಿಂದ ದೂರವಾಗಿ ಸುಭಿಕ್ಷ ಕಾಣುವುದು. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿಯೂ ಯಶಸ್ಸಿನ ನಾಗನೋಟ ಮುಂದುವರೆಯುವುದು ಎಂದು ಶ್ರೀ ಶ್ರೀ ದತ್ತಾತ್ರೇಯ ಗುರು ಮತ್ತು ತಾಯಿ ಮಾನಸಾದೇವಿಯ ಉಪಾಸಕರಾದ ಜ್ಯೋತಿಷಿ ಶಂಭುಲಿಂಗಪ್ಪರವರು ಕರ್ನಾಟಕ, ಅಖಂಡ ಭಾರತ ದೇಶದ ಸಮಸ್ತ ನಾಗರೀಕರಿಗೆ ಶುಭವನ್ನು ಪತ್ರಿಕೆ ಮೂಲಕ ತಿಳಿಯಪಡಿಸಿದ್ದಾರೆ.

Related