ಗಗನಕ್ಕೇರಿದ ಮಾಂಸದ ಬೆಲೆ..!

ಗಗನಕ್ಕೇರಿದ ಮಾಂಸದ ಬೆಲೆ..!

ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳ ಯುಗಾದಿ ಹಬ್ಬ ಮತ್ತು ಮುಸ್ಲಿಮರ ರಂಜಾನ್ ಹಬ್ಬ ಒಟ್ಟಿಗೆ ಬಂದ ಕಾರಣ ಮಾಂಸದ ಬೆಲೆ ಗಗನಕ್ಕೇರಿದೆ.

ನಿನ್ನೆ ಯುಗಾದಿ ಹಬ್ಬ ಆಚರಿಸಲಾಗಿತ್ತು. ಇಂದು ಹೊಸತೊಡಕು ಇರುವುದರಿಂದ ಎಲ್ಲರೂ ಮಾಂಸ ಖರೀದಿಯಲ್ಲಿ ತೊಡಗಿದ್ದಾರೆ. ಇನ್ನು ಈಗಾಗಲೇ ಮಾಂಸದ ಬೆಲೆ ಗಗನಕೇರಿದ್ದು ಮಟನ್ ಸುಮಾರು 1 ಕೆ.ಜಿಗೆ 850 ಯಾಗಿದ್ದರೂ ಕೂಡ ಗ್ರಾಹಕರು ಖರೀದಿಗೆ ಮುಂದಾಗಿದ್ದಾರೆ.

ಇನ್ನು ಚಿಕನ್ ಒಂದು ಕೆಜಿ ಸ್ಕೀನ್ ಔಟ್ ಗೆ 300 ರುಪಾಯಿ. ನಾಟಿ ಕೋಳಿ ಕೆಜಿಗೆ 400 ರೂಪಾಯಿ, ಫಾರಮ್ ಕೋಳಿಗೆ 160 ರೂಪಾಯಿ , ಬಾಯ್ಲರ್ ಕೋಳಿಗೆ 200 ರೂಪಾಯಿ, ವಿತ್ ಸ್ಕಿನ್  ಚಿಕನ್ ಗೆ  280 ರುಪಾಯಿ, ಬೋನ್‌ಲೆಸ್‌ ಚಿಕನ್‌ಗೆ 520 ರೂ.  ಏರಿಕೆಯಾಗಿದೆ. ಬೆಲೆ ಏರಿಕೆಯಾದ್ರು ಜನ ಮಾತ್ರ ಮಾಂಸ ಖರೀದಿಗೆ ಮುಗಿಬೀಳುತ್ತಿದ್ದಾರೆ.

 

Related