ಖರ್ಜೂರದಲ್ಲಡಗಿದೆ ಆರೋಗ್ಯದ ಗುಟ್ಟು

ಖರ್ಜೂರದಲ್ಲಡಗಿದೆ ಆರೋಗ್ಯದ ಗುಟ್ಟು

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ವಿವಿಧ ರೀತಿಯ ಹಣ್ಣು ಹಂಪಲು ಮತ್ತು ಡ್ರೈ ಫ್ರೂಟ್ಸ್ ಗಳನ್ನು ಬೆಳಿಗ್ಗೆ ಎದ್ದ ಕೂಡಲೇ ಸೇವನೆ ಮಾಡುತ್ತೇವೆ. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಇನ್ನು ಡ್ರೈ ಫ್ರೂಟ್ಸ್ ನಲ್ಲಿಯೇ ಅತ್ಯಂತ ಶಕ್ತಿಯನ್ನು ಹೊಂದಿರುವ ಖರ್ಜೂರದಲ್ಲಿ ವಿವಿಧ ರೀತಿಯ ಪ್ರೋಟೀನ್ಗಳು ನಮ್ಮ ಆರೋಗ್ಯದಲ್ಲಿ ಇರುವಂತಹ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಖರ್ಜೂರವನ್ನು ಪ್ರತಿನಿತ್ಯ ಎರಡರಿಂದ ಮೂರು ಸೇವನೆ ಮಾಡುವುದರಿಂದ ನಮ್ಮ ಮುಖದ ಕಾಂತಿ ಮತ್ತು ಕೂದಲ ಸೌಂದರ್ಯ ಇನ್ನಿತರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಖರ್ಜೂರ ಮರುಭೂಮಿಯ ಬೆಳೆಯಾದರೂ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ.

 

* ಒಣಗಿದ ಖರ್ಜೂರಗಳಲ್ಲಿ ಕಂಡುಬರುವ ರಂಜಕ, ಪೋಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಖನಿಜಗಳು ನಮ್ಮ ಎಲುಬುಗಳನ್ನು ಬಲಪಡಿಸುತ್ತವೆ.

 

* ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಖರ್ಜೂರ ಸೇವನೆ ಉತ್ತಮ. ಪ್ರತಿನಿತ್ಯ ಖರ್ಜೂರ ಸೇವನೆಯನ್ನು ರೂಢಿಯಲ್ಲಿಟ್ಟುಕೊಂಡರೆ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

 

* ಖರ್ಜೂರಗಳನ್ನು ನಿಯಮಿತವಾಗಿ ಸೇವಿಸುವ ಜನರು ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹೊಂದಬಹುದಾಗಿದೆ. ಖರ್ಜೂರಗಳಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ.

 

* ಒಂದು ಲೋಟ ಹಾಲಿಗೆ ಖರ್ಜೂರದ ಪೇಸ್ಟ್ ಅಥವಾ ಖರ್ಜೂರದ ಚೂರನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

 

* ಖರ್ಜೂರ ತೂಕ ನಷ್ಟಕ್ಕೆ ಸಹ ಸಹಾಯ ಮಾಡುತ್ತದೆ. ಕರಗುವ ನಾರಿನಂಶವಿದೆ, ಆದರೆ ಈ ನಾರಿನಂಶ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತವೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

 

* ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದಾಗಿದೆ.

 

* ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

Related