ಹೆಸರಿಗಷ್ಟೇ ಹೊಸ ತಾಲ್ಲೂಕಾಗಿ ಉಳಿದ ಕೊಟ್ಟೂರು

ಹೆಸರಿಗಷ್ಟೇ ಹೊಸ ತಾಲ್ಲೂಕಾಗಿ ಉಳಿದ ಕೊಟ್ಟೂರು

ಕೊಟ್ಟೂರು : ಐತಿಹಾಸಿಕ ಸ್ಥಳವಾಗಿದ್ದು, ಇತಿಹಾಸದಲ್ಲಿ ತನ್ನದೇಯಾದ ಛಾಪನ್ನು ಹೊಂದಿದೆ. ಕೊಟ್ಟೂರು ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹೊಸದಾಗಿ ತಾಲ್ಲೂಕೆಂದು ಘೋಷಣೆಯಾಯಿತು.

ಇಲ್ಲಿನ ಜನರ ಇಚ್ಛಾಶಕ್ತಿಯ ಸಶಕ್ತ ಹೋರಾಟದ ಫಲವಾಗಿ ಕೊಟ್ಟೂರು ತಾಲ್ಲೂಕು ಹೊಸದಾಗಿ ಘೋಷಣೆಗೊಂಡಿತು. ಆದರೆ ತಾಲ್ಲೂಕು ಕಛೇರಿಗಳು ಸಂಪೂರ್ಣವಾಗಿ ಬಂದಿಲ್ಲವೆನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಹೊಸದಾಗಿ ವಿಜಯನಗರ ಜಿಲ್ಲಾ ಅಸ್ತಿತ್ವಕ್ಕೆ ಬಂದಿದೆ ಆದರೆ ಪಶ್ಚಿಮ ತಾಲ್ಲೂಕು ಆಗಿ 3 ವರ್ಷ ಕಳೆದರೂ ಒಂದು ಎರಡು ಕಚೇರಿ ಬಿಟ್ಟರೆ ಇನ್ಯಾವ ಕಚೇರಿಗಳು ಬಂದಿರುವುದಿಲ್ಲ ತಾಲ್ಲೂಕು ಆಗಿದ್ದರೂ ತಾಲ್ಲೂಕು ಇಲ್ಲದಂತೆ ಕಾಣುತ್ತಿದೆ. ಇಲ್ಲಿನ ಜನರಿಗೆ ಈ ಹಿಂದೆ ಯಾತ್ರಿ ನಿವಾಸಕ್ಕೆಂದು ಇದ್ದ ಸ್ಥಳವನ್ನು ತಹಶೀಲ್ದಾರರ ಕಛೇರಿಯನ್ನಾಗಿ ಮಾರ್ಪಡಿಸಿಕೊಂಡು ಆಡಳಿತ ನಡೆಸುತ್ತಿದೆ.

ಕಂದಾಯ ಇಲಾಖೆಗೆ ಸಂಬAಧಿಸಿದ ನೋಂದಣ ಮತ್ತು ಮುದ್ರಾಂಕ, ಆಹಾರ ಇಲಾಖೆ, ಮೀನುಗಾರಿಕೆ ಇಲಾಖೆ, ನ್ಯಾಯಾಲಯ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳು ಪ್ರಾರಂಭವಾಗದೇ ಇರುವುದು ತಾಲ್ಲೂಕಿನ ಹಿನ್ನೆಡೆಗೆ ಸಾಕ್ಷಿಯಾಗಿವೆ.

ಇದೇ ರೀತಿಯಾಗಿ ಈಗ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯೆಂದು ಘೋಷಣೆ ಮಾಡಿದ್ದರೂ ಸಹ ವಿಜಯನಗರ ಜಿಲ್ಲೆಗೂ ಸಹ ಇದೇ ರೀತಿಯ ಪರಿಸ್ಥಿತಿ ಬರಬಾರದೆಂದು ಕೊಟ್ಟೂರು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಆದಷ್ಟು ಬೇಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಹೊಸದಾಗಿ ಘೋಷಣೆಯಾಗಿರುವ ತಾಲ್ಲೂಕಿಗೆ ಎಲ್ಲಾ ಇಲಾಖೆಗಳ ತಾಲ್ಲೂಕು ಕಛೇರಿಗಳನ್ನು ಪ್ರಾರಂಭಿಸುವುದರ ಮೂಲಕ ಸಾರ್ವಜನಿಕರ ಮೊಗದಲ್ಲಿ ಹರ್ಷ ತರುವ ಪ್ರಯತ್ನ ಮಾಡಬೇಕಿದೆ.

ಈ ಸಂದರ್ಭದಲ್ಲಿ ಕೊಟ್ಟೂರು ಬಿಜೆಪಿ ಘಟಕದ ಅಧ್ಯಕ್ಷ ಬಿ.ಆರ್ ವಿಕ್ರಮ್, ಹೆಚ್.ಬಿ ಹಳ್ಳಿ ಮಂಡಳದ ಉಪಾಧ್ಯಕ್ಷ ಉಮಾಪತಿ, ಯುವಮೋರ್ಚಾ ಅಧ್ಯಕ್ಷ ಎಂ.ಶ್ರೀನಿವಾಸ್, ಮಾಜಿ ಪ.ಪಂ. ಸದಸ್ಯ ಚಿರಿಬಿ ಕೊಟ್ರೇಶ್, ಎಸ್.ಪಿ ಪ್ರಕಾಶ್, ಕೊಟ್ರೇಶ್, ಹನುಮಂತಪ್ಪ ಇನ್ನಿತರರಿದ್ದರು.

Related