ಪ್ರತಿಭಟನಾ ಮೆರವಣಿಗೆ

ಪ್ರತಿಭಟನಾ ಮೆರವಣಿಗೆ

ಕಲಬುರಗಿ : ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಸೇರಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ಸೋಮವಾರ ನಡೆಯುತ್ತಿರುವ ಕರ್ನಾಟಕ ಬಂದ್‌ಗೆ ಕಲಬುರಗಿಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ಬಂದ್ ಅಂಗವಾಗಿ ಜಿಲ್ಲೆಯ ರೈತ, ಕನ್ನಡ ಪರ ಸಂಘಟನೆಗಳು ಕಲಬುರಗಿ ಬಂದ್ ಆಚರಣೆ ಹೆಸರಲ್ಲಿ ಹೋರಾಟ ಹಮ್ಮಿಕೊಂಡಿದೆ. ಬೆಳಿಗ್ಗೆ ನಗರದಲ್ಲಿ  ಕೇಂದ್ರ ಬಸ್ ನಿಲ್ದಾಣ ಮುಂದೆ ಪ್ರತಿಭಟನೆ ನಡೆಸಲಾಯಿತು.

ಅಲ್ಲಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ತಲುಪಿದ್ದು, ಹಲವು ಮುಖಂಡರು ಮಾತನಾಡಿ, ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಜಾರಿ ತರಲು ಮುಂದಾಗಿರುವ ತಿದ್ದುಪಡಿ ಕಾಯ್ದೆಗಳು ಕೇವಲ ರೈತರಿಗೆ ಮಾತ್ರ ಪ್ರತಿಯೊಬ್ಬ ಪ್ರಜೆಯ ಹಿತಾಸಕ್ತಿಗೆ ಹಾನಿ ಉಂಟು ಮಾಡಲಿವೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ್ ಹೇಳಿದರು.

Related