ಕವಿ ಪೂರ್ವಗ್ರಹ ಪೀಡಿತನಾಗಿಬಾರದು

ಕವಿ ಪೂರ್ವಗ್ರಹ ಪೀಡಿತನಾಗಿಬಾರದು

ಗಂಗಾವತಿ : ಅಖಿಲ ಭಾರತ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಹಾಗೂ ಗಂಗಾವತಿ ತಾಲೂಕು ಸಮಿತಿ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಆನೆಗೊಂದಿಯ ಐತಿಹಾಸಿಕ, ಇತಿಹಾಸ ಹಿನ್ನೆಲೆಯುಳ್ಳ ಕಿಷ್ಕಿಂದೆಯ ವಾಲಿಕಿಲ್ಲಾ ಶ್ರೀ ಆದಿಶಕ್ತಿ ದುರ್ಗಾದೇವಿ ಬೆಟ್ಟದಲ್ಲಿ ಭಾನುವಾರ ಕವಿಗೋಷ್ಠಿ ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ರಾಜ ವಂಶಸ್ಥರಾದ ಲಲಿತಾರಾಣಿ ಶ್ರೀ ರಂಗ ದೇವರಾಯಲು ನೆರವೇರಿಸಿದರು. ಸಾನಿಧ್ಯವನ್ನು ಶ್ರೀಬ್ರಹ್ಮಾನಂದ ಮಹಾ ರಾಜರು ವಹಿಸಿದ್ದರು, ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಬೀಚಿ ಪ್ರಾಣೇಶ್ ಮಾತನಾಡಿ, ರಾಮನ ಆದರ್ಶ ಎಲ್ಲ ಕಾಲದಲ್ಲಿ ಪ್ರಸ್ತುತ, ರಾಮನ ವ್ಯಕ್ತಿತ್ವದ ಮೇಲೆ ಕನ್ನಡ ಸಾಹಿತ್ಯದಲ್ಲಿ ಹಲವಾರು ಕೃತಿಗಳು ರಚನೆಗೊಂಡಿವೆ. ನಮ್ಮೆಲ್ಲ ಕವಿಗಳು ಪುರಾಣ, ಕಾವ್ಯಗಳನ್ನು ಅಭ್ಯಸಿಸಬೇಕು. ಅಲ್ಲಿಯ ಮಾನವೀಯತೆಯ ಕುರಿತು ಬೆಳಕು ಚೆಲ್ಲಬೇಕು ಎಂದು ಹೇಳಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಡಾ.ನಾರಾಯಣ ಕಂದಗಲ್ ಮಾತನಾಡಿ “ರಾಮ ನಮ್ಮೆಲ್ಲರ ಆದರ್ಶ, ಭಾರತದ ಪ್ರತಿ ಕಣ ಕಣದಲ್ಲೂ ರಾಮನ ಪ್ರಭಾವ ಇದೆ, ಪೂರ್ವಗ್ರಹ ಪೀಡಿತರಾಗಿ ನಮ್ಮ ಪುರಾಣ ಕಾವ್ಯಗಳನ್ನು ನೋಡಬಾರದು, ಅಲ್ಲಿಯ ಮೌಲ್ಯ, ಆದರ್ಶ ಇಂದಿಗೂ ಅವಶ್ಯವಾಗಿದೆ, ರಾಮನನ್ನು ಪೂಜಿಸುವ ದೇಶದಲ್ಲಿ ಅವಮಾನಿಸುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿ. ಈ ದೇಶದ ಸಂಸ್ಕ್ರತಿ, ಪರಂಪರೆಗಳ ಕುರಿತು ಅಭಿಮಾನ ಮೂಡಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕಾಗಿದೆ. ಕವಿ ಪೂರ್ವಗ್ರಹ ಪೀಡಿತನಾಗಿಬಾರದು, ಸಮಚಿತ್ತದಿಂದ ಪ್ರತಿಯೊಂದು ವಿಷಯವನ್ನು ಗ್ರಹಿಸಬೇಕು, ಕವಿ ಸದಾ ಅಧ್ಯಯನ ಶೀಲರಾಗಬೇಕು ಎಂದು ಹೇಳಿದರು.

ಕವಿಗೋಷ್ಠಿಯಲ್ಲಿ ವೆಂಕಟರಾವ್ ಕುಲ್ಕರ್ಣಿ, ಮಲ್ಲೇಶಪ್ಪ ಅಂಗಡಿ, ಕರಿಸಿದ್ದನಗೌಡ, ಮಾಲಾ ಶ್ರೀಧರ, ಲಕ್ಷ್ಮೀದೇವಿ ಪತ್ತಾರ, ಮುರಳೀಧರ ಜೋಷಿ, ಛತ್ರಪ್ಪ ತಂಬೂರಿ, ಬಸವರಾಜ ಹೇರೂರು, ಸುರೇಶ ಕಲಾಪ್ರಿಯ, ಮಹಾದೇವ ಮೋಟಿ, ಯಲ್ಲಪ್ಪ ಕಲಾಲ್, ಶರಣಪ್ಪ ತಳ್ಳಿ, ಪ್ರಕಾಶ ಪಾಟೀಲ ಕವನ ವಾಚನ ಮಾಡಿದರು.

ಸಭೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಅಶೋಕ ಕುಮಾರ ರಾಯ್ಕರ, ರೋಷನ್ ಭಂಡಾರಿ, ರಾಘವೇಂದ್ರ ಮಂಗಳೂರು, ಶ್ರೀನಿವಾಸ ಕುಲ್ಕರ್ಣಿ, ಪವನ್ ಕುಮಾರ್, ಪ್ರಕಾಶ ಪಾಟೀಲ, ಶರಣಪ್ಪ ತಳ್ಳಿ, ಛತ್ರಪ್ಪ ತಂಬೂರಿ ಉಪಸ್ಥಿತರಿದ್ದರು.

Related