ಸಂಚಲನ ಮೂಡಿಸಿದ ಆಪರೇಷನ್ ಹಸ್ತ; ಬಿಜೆಪಿ ಶಾಸಕರಿಗೆ ಗಾಳ

ಸಂಚಲನ ಮೂಡಿಸಿದ ಆಪರೇಷನ್ ಹಸ್ತ; ಬಿಜೆಪಿ ಶಾಸಕರಿಗೆ ಗಾಳ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಪರೇಷನ್ ಬಿರುಗಾಳಿ ಬುಗಿಲೆದ್ದಿದೆ. ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ರಾಜ್ಯ ರಾಜಕೀಯದಲ್ಲಿ ಕುದುರೆವ್ಯಾಪಾರ ಬಲುಜೋರಾಗಿ ನಡೆಯುತ್ತಿದೆ. ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದರುವ ಕಾಂಗ್ರೇಸ್ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಪರೇಷನ್ಗೆ ಕೈಹಾಕಿದೆ.

ಲೋಕಸಭೆ ಗೆಲುವಿನ ತಂತ್ರದ ಭಾಗವನ್ನಿಟ್ಟುಕೊಂಡು ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಭರ್ಜರಿ ಪ್ಲ್ಯಾನ್ ರೂಪಿಸಿದ್ದಾರೆ. ಖುದ್ದು ಡಿಕೆ ಶಿವಕುಮಾರ್ ಆಪರೇಷನ್ ಸುಳಿವು ಬಿಟ್ಟು ಕೊಟ್ಟಿದ್ದು. ಇನ್ನು ಕಾಂಗ್ರೆಸ್ ಆಪರೇಷನ್ಗೆ ಇಂಬುಕೊಡುವಂತೆ ಡಿಕೆ ಸಹೋದರ ಡಿ.ಕೆ.ಸುರೇಶ್  ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು ಹೇಳಿದ್ದಾರೆ.

ಹಾಗಾಗಿ ಈ ಹಿಂದೆ ಬಿಜೆಪಿ ಸೇರಿರೋ ಯಾವ ಯಾವ ಶಾಸಕರನ್ನ ಸೆಳೆಯೋಕೆ ಕಾಂಗ್ರೆಸ್ ಪ್ಲ್ಯಾನ್ ಮಾಡುತ್ತಿದೆ. ವಿ.ಸೋಮಣ್ಣ ಕಾಂಗ್ರೆಸ್ಗೆ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಬಿಜೆಪಿಯಲ್ಲಿ ವಿ.ಸೋಮಣ್ಣ ರಾಜ್ಯಾಧ್ಯಕ್ಷ ಮತ್ತು ಲೋಕಸಭೆ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಆ ಸ್ಥಾನ ನೀಡದೇ ಹೋದ್ರೆ ಅದನ್ನೇ ಕಾರಣವಾಗಿ ಮುಂದಿಟ್ಟು, ಬಿಜೆಪಿ ಬಿಡುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ.

ಇನ್ನು ಭೈರತಿ ಬಸವರಾಜ್ ಸಹ ಕಾಂಗ್ರೆಸ್ಗೆ ವಾಪಸ್ ಬರುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ. ಈ ಬಗ್ಗೆ ಇನ್ನೂ ನಿಖರವಾಗಿಲ್ಲ. ಇನ್ನು ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯರನ್ನ ಇದೀಗ ಲೋಕಸಭೆ ಚುನಾವಣೆ ವೇಳೆ ಅವರನ್ನ ಸೆಳೆಯುವುದಕ್ಕೆ ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ನನ್ನ ಗುರು, ನಾನು ಸಿದ್ದರಾಮಯ್ಯ ಶಿಷ್ಯ ಎಂದು ಗುಣಗಾನ ಮಾಡುತ್ತಿರುವ ಸೋಮಶೇಖರ್ ದಿನೇ ದಿನೇ ಕಾಂಗ್ರೆಸ್ಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿಕೇಳಿ ಬರುತ್ತಿದೆ. ಈ ಮಧ್ಯೆ ಬಿಜೆಪಿ  ಸೇರಿದ್ದ ಮುನಿರತ್ನ ಕೂಡ ಮರಳಿ ಕಾಂಗ್ರೆಸ್ ಗೂಡು ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುನಿರತ್ನ, ನಾನು ಬಿಜೆಪಿಯಲ್ಲೇ ಇರುತ್ತೇನೆ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ.

ಇನ್ನು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸಿ.ಟಿ.ರವಿ, ಕಾಂಗ್ರೆಸ್ಗೆ ಹೋಗುವವರು ಯಾರೂ ಇಲ್ಲ. ಆದರೆ ಅನುಮಾನ ಬಂದ್ರೆ ಅಪನಂಬಿಕೆಯಿಂದ ಕಾಣಬೇಕಾಗುತ್ತದೆ ಎಂದಿದ್ದಾರೆ. ಏನೇ ಆದರೂ ಆಪರೇಷನ್ ಹಸ್ತ ಶುರುವಾಗಿರುವುದು ಬಹುತೇಕ ಕಚಿತ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಯಾವೆಲ್ಲಾ ರಾಜಕೀಯ ನಾಯಕರು ಅಪರೇಷನ್ ಕೈ ಹಿಡಿಯುತ್ತಾರೆಂದು ಕಾಯಬೇಕು.

 

ವರದಿಗಾರರು

ಎಲ್.ಮಂಜುನಾಥ(ವಿಜಯನಗರ)

Related