ಮಗುವನ್ನು ಜಮೀನಿನಲ್ಲಿ ಎಸೆದ ತಾಯಿ

ಮಗುವನ್ನು ಜಮೀನಿನಲ್ಲಿ ಎಸೆದ ತಾಯಿ

ರಾಯಚೂರು :   ಜಿಲ್ಲೆಯ ಲಿಂಗಸೂರು ತಾಲೂಕಿನ ಬೆಂಡೋನಿ ಗ್ರಾಮದಲ್ಲಿ ಕಳೆದ ಒಂದೇ ಒಂದು ದಿನದ ಹಿಂದಷ್ಟೇ ಜನಿಸಿದ ನವಜಾತ ಹೆಣ್ಣಮಗುವನ್ನು ನಿರ್ದಯಿ ತಾಯಿಯೊಬ್ಬಳು ಜಮೀನಿನಲ್ಲಿಯೇ ಬಿಸಾಡಿ ಹೋಗಿರುವುದು ಪತ್ತೆಯಾಗಿದೆ.

ಮಕ್ಕಳಿರಲವ್ವ ಮನೆ ತುಂಬಾ ಎಂಬುದಾಗಿ ಹಿಂದಿನಿಂದಲೂ ಹಿರಿಯರು ಹೇಳುತ್ತಿದ್ದಾರೆ. ಆದ್ರೇ ಇಲ್ಲೊಬ್ಬ ನಿರ್ದಯಿ ತಾಯಿಯೊಬ್ಬಳು ಹೆಣ್ಣಮಗು ಎನ್ನುವ ಕಾರಣಕ್ಕಾಗಿ ನವಜಾತ ಶಿಶುವೊಂದನ್ನು ಜಮೀನಿನಲ್ಲಿಯೇ ಎಸೆದು ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನಲ್ಲಿ ನಡೆದಿದೆ.

ಜಮೀನಿನಲ್ಲಿ ಮಗು ಅಳುತ್ತಿದ್ದನ್ನು ಕೇಳಿದಂತ ದಾರಿಹೋಕರೊಬ್ಬರು ಹತ್ತಿರ ಬಂದು ನೋಡಿದಾಗ ನವಜಾತ ಹೆಣ್ಣುಮಗು ಕಂಡು ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ, ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಮಗುವನ್ನು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡಿದ್ದಂತ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಿಲಿಸಿದ್ದಾರೆ.

Related