ಮಗಳನ್ನೇ ಕೊಲೆ ಮಾಡಲು ಸುಪಾರಿ ಕೊಟ್ಟ ತಾಯಿ

ಮಗಳನ್ನೇ ಕೊಲೆ ಮಾಡಲು ಸುಪಾರಿ ಕೊಟ್ಟ ತಾಯಿ

ಮಗಳನ್ನು ಕೊಲೆ ಮಾಡಲು ಹೆತ್ತ ತಾಯಿಯೇ ಸುಪಾರಿ ನೀಡಿರು ಒಡಿಶಾದ ಬಾಲ್‌ಸೋರ್‌ನಲ್ಲಿ ನಡೆದಿದೆ.

50 ಸಾವಿರ ರೂ. ಕೊಲೆ ಮಾಡಲು ಈಕೆ ನೀಡಿದ್ದಾಳೆ. 36 ವರ್ಷದ ಮಗಳು ಶಿವಾನಿ ಕೊಲೆಯಾದವಳು. ಈಕೆಯ ಶವ ಅನುಮಾನಾಸ್ಪದವಾಗಿ ಪೊಲೀಸರಿಗೆ ಸಿಕ್ಕಿತ್ತು. ನಾಗ್ರಾಮ್ ಗ್ರಾಮದ ಸೇತುವೆಯಲ್ಲಿ ಶಿವಾನಿಯ ಶವ ಪತ್ತೆಯಾಗಿತ್ತು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು

ಅದರ ಬೆನ್ನತ್ತಿ ಹೋದಾಗ ತಾಯಿಯೇ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ 58 ವರ್ಷದ ಸುಕುರಿ ಎನ್ನುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಸುಪಾರಿ ಪಡೆದಿದ್ದ ಪ್ರಮೋದ್ ಜೆನಾ ಎಂಬ ವ್ಯಕ್ತಿಯನ್ನೂ ಬಂಧಿಸಿದ್ದಾರೆ.

ಅಷ್ಟಕ್ಕೂ ಇಂಥದ್ದೊAದು ಕೃತ್ಯವನ್ನು ಮಾಡಲು ಕಾರಣ ಎಂದರೆ ಈ ಮಹಿಳೆಯ 36 ವರ್ಷದ ಮಗಳು ಶಿವಾನಿ ನಾಯಕ್ ಅಕ್ರಮ ಮದ್ಯ ವ್ಯಾಪಾರದಲ್ಲಿ ಭಾಗಿಯಾದ್ದಳು ಎನ್ನುವ ಕಾರಣಕ್ಕೆ. ಈಕೆ ಇಂಥ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದು ಪೊಲೀಸರಿಗೆ ತಿಳಿದುಬಂದಿದೆ. ಇದೇ ವಿಷಯವಾಗಿ ಅಮ್ಮ-ಮಗಳಿಗೆ ಜಗಳವಾಗುತ್ತಿತ್ತು.

ಎಷ್ಟೇ ಬುದ್ಧಿ ಹೇಳಲು ಪ್ರಯತ್ನಿಸಿದರೂ ಆಕೆ ಕೇಳದಿದ್ದ ಕಾರಣಕ್ಕೆ ಮಗಳನ್ನೇ ಕೊಲ್ಲುವ ನಿರ್ಧಾರಕ್ಕೆ ತಾಯಿ ಬಂದಿರುವುದಾಗಿ ಬಾಲ್‌ಸೋರ್ ಸದರ್ ಉಪವಿಭಾಗದ ಪೊಲೀಸ್ ಅಧಿಕಾರಿ ಪ್ರವಾಶ್ ಪಾಲ್ ಹೇಳಿದರು.

Related