ಜಿಂದಾಲ್ಗೆ 10 ದಿನಗಳ ಗಡುವು ವಿಧಿಸಿದ ಶಾಸಕ

ಜಿಂದಾಲ್ಗೆ 10 ದಿನಗಳ ಗಡುವು ವಿಧಿಸಿದ ಶಾಸಕ

ಬಳ್ಳಾರಿ : ಜಿಲ್ಲೆಯ ಭೂಮಿ, ಜಲ, ಸಂಪನ್ಮೂಲ ಸೇರಿದಂತೆ ಸಕಲವನ್ನು ಉಪಯೋಗಿಸಿಕೊಂಡು ಲಾಭಗಳಿಸುತ್ತಿರುವ ಜಿಂದಾಲ್ ಈ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೆರವಿಗೆ ಪರಿಣಾಮಕಾರಿಯಾಗಿ ಧಾವಿಸಬೇಕಿತ್ತು.

ಆದರೆ ಇದುವರೆಗೆ ಕೈಜೋಡಿಸದಿರುವುದು ವಿಷಾದಕರ. ಜಿಂದಾಲ್ ಕೂಡಲೇ 10 ದಿನದೊಳಗೆ 1 ಸಾವಿರ ಬೆಡ್ಗಳ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದಲ್ಲಿ ಬಳ್ಳಾರಿಯಿಂದ ಜಿಂದಾಲ್ವರೆಗೆ ಪಾದಯಾತ್ರೆ ನಡೆಸಿ ಕಾರ್ಖಾನೆ ಎದುರು ಪ್ರತಿಭಟನೆಗೆ ಕುಳಿತುಕೊಳ್ಳುವೆನು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದ್ದು, ಬೆಡ್ಗಳ ಕೊರತೆ ಕಾಣುತ್ತಿದೆ. ಇದನ್ನು ನೀಗಿಸಲು ಜಿಂದಾಲ್ ಸಂಸ್ಥೆಯವರು ಸಾವಿರ ಬೆಡ್ಗಳ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು ಮತ್ತು ಅಗತ್ಯ ಸಹಾಯ-ಸಹಕಾರ ಕಲ್ಪಿಸಬೇಕು. ಇದಕ್ಕೆ 10 ದಿನದೊಳಗೆ ಗಡುವು ನೀಡಲಾಗುವುದು. ಅಷ್ಟರೊಳಗೆ ಸ್ಪಂದಿಸದಿದ್ದಲ್ಲಿ ಜಿಂದಾಲ್ ಸಂಸ್ಥೆ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Related