ಧಾರವಾಹಿಯಿಂದ ಹೊರ ಬಂದ ನಾಯಕಿ!

ಧಾರವಾಹಿಯಿಂದ ಹೊರ ಬಂದ ನಾಯಕಿ!

ಬೆಂಗಳೂರು : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ನಾಯಕಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿದ್ದ ಮೇಘಾ ಶೆಟ್ಟಿ ಹೊರಬಂದಿದ್ದಾರೆ.

ಮೇಘಾ ಈಗಾಗಲೇ ತಮ್ಮ ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ. ಆದರೆ ಮೇಘಾ ಹೊರಹೋಗುತ್ತಿರುವ ಸುದ್ದಿ ತಿಳಿದು ಅವರ ಅಭಿಮಾನಿ ವರ್ಗ ತೀವ್ರ ಬೇಸರ ವ್ಯಕ್ತಪಡಿಸಿದೆ.
ತಿಂಗಳ ಅಂತ್ಯದಲ್ಲಿ ಅನು ಸಿರಿಮನೆ ಪಾತ್ರಕ್ಕೆ ಹೊಸ ನಾಯಕಿಯ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಮೇಘಾನೇ ಅನು ಸಿರಿಮನೆಯಾಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.

Related