ತಾತನ ಮೃತದೇಹವನ್ನು ಅಡಗಿಸಿಟ್ಟ ಮೊಮ್ಮಗ

  • In Crime
  • August 13, 2021
  • 261 Views
ತಾತನ ಮೃತದೇಹವನ್ನು ಅಡಗಿಸಿಟ್ಟ ಮೊಮ್ಮಗ

ವಾರಂಗಲ್ : ಅನಾರೋಗ್ಯದಿಂದ ಮೃತಪಟ್ಟ ಅಜ್ಜನ ಮೃತದೇಹವನ್ನು ಮೊಮ್ಮಗ ಫ್ರಿಡ್ಜ್ ನಲ್ಲಿ  ಅಡಗಿಸಿಟ್ಟ ಘಟನೆ ಶುಕ್ರವಾರ ತೆಲಂಗಾಣದ ವಾರಂಗಲ್ ಜಿಲ್ಲೆಯ ಪಾರ್ಕಲನಲ್ಲಿ ನಡೆದಿದೆ.
93 ವರ್ಷದ ಬಾಲಯ್ಯ ಎಂಬುವವರು ಮಾನಸಿಕ ಅಸ್ವಸ್ಥನಾಗಿದ್ದ ತಮ್ಮ ಮೊಮ್ಮಗ ನಿಖಿಲ್ ಜೊತೆಗೆ ವಾಸಿಸುತ್ತಿದ್ದು, ಇತ್ತೀಚೆಗೆ ಅವರು ವಯೋಸಹಜ ರೋಗದಿಂದ ಮೃತಪಟ್ಟಿದರು. ತಾತನ ಪಿಂಚಣಿ ಹಣಕ್ಕಾಗಿ ಮೊಮ್ಮಗ ನಿಖಿಲ್ ಮೃತದೇಹವನ್ನು ಫ್ರಿಡ್ಜ್ ನಲ್ಲಿ  ಅಡಗಿಸಿಟ್ಟಿದು ಅಕ್ಕ ಪಕ್ಕದ ಮನೆಯವರಿಗೆ ದುರ್ನಾತ ಬರುತ್ತಿದ್ದಂತೆ ಪೋಲಿಸರಿಗೆ ಸುದ್ದಿ ತಿಳಿಸಿದ್ದಾರೆ. ನಂತರ ಪೋಲಿಸರು ಬಂದು ತನಿಖೆ ನಡೆಸಿ ನಿಖಿಲ್‌ನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Related