ಇಪ್ಪತ್ತು ಸಾವಿರ ಉದ್ಯೋಗದ ಗುರಿ

ಇಪ್ಪತ್ತು ಸಾವಿರ ಉದ್ಯೋಗದ ಗುರಿ

ಆನೇಕಲ್ : ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿದ್ದು, ಐದು ವರ್ಷದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘವು ಬೊಮ್ಮಸಂದ್ರ ಸರ್ಕ್ಲ್ನಲ್ಲಿ ನಿರ್ಮಿಸಿದ್ದ ಪೊಲೀಸ್ ಚೌಕಿ, ಟ್ರಾಫಿಕ್ ಸಿಗ್ನಲ್, ಪಾರ್ಕ್ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ವೇಳೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಮಾಲೀಕರ ಸಂಘವು ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದು ಹೆಚ್ಚು ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಸರ್ಕಾರ ಜೊತೆಗೆ ಸಹಕಾರವನ್ನು ನೀಡಬೇಕು ಸಿಲ್ಕ್ ದೌಲಪ್ಮೆಂಟ್ ಗೆ ಕೇಳಿರುವ 5 ಎಕರೆ ಜಾಗ ಮಂಜೂರು ಮಾಡಬೇಕಾಗಿ ಸರ್ಕಾರದಲ್ಲಿ ಮನವಿಯನ್ನು ಮಾಡಿದರು.

ಸಂಘದ ಅಧ್ಯಕ್ಷ ಚಲ ಪ್ರಸಾದ್ ಮಾತನಾಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶವು ಸರ್ಕಾರಕ್ಕೆ 50 ಕೋಟಿ ಕಂದಾಯವನ್ನು ಪಾವತಿ ಮಾಡುತ್ತಿದೆ. ಎರಡು ಲಕ್ಷ ಕಾರ್ಮಿಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಎಸೆಸೆಲ್ಸಿ, ಏಳನೇ ತರಗತಿ ಮೇಲೆ ಕೆಲಸಕ್ಕೆ ಸೇರಿದ್ದು, ಅವರಿಗೆ ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯಲು ಸ್ಥಳಾವಕಾಶವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

Related